ಹೈದರಾಬಾದ್- ಕುಡಿತಕ್ಕೆ ದಾಸನಾಗಿರುವ ಕುಡುಕನೋರ್ವ ಮದ್ಯ ಖರೀದಿಸಲು ತನ್ನ ಮಗನನ್ನೇ ಮಾರಾಟಕ್ಕಿಟ್ಟು ಇದೀಗ ಪೊಲೀಸರ ಸ್ಪೆಷಲ್ ಗೆಸ್ಟ್ ಆಗಿದ್ದಾನೆ.
ರಾಜು ಹಾಗೂ ಸಾರಾ ದಂಪತಿ ಮಲಕ್ ಪೇಟೆ ಪ್ರದೇಶದ ಫುಟ್ ಪಾತ್ ಬಳಿ ವಾಸಿಸುತ್ತಾ ಜೀವನ ನಡೆಸುತ್ತಿದ್ದರು. ಇವರಿಗೆ 6 ತಿಂಗಳ ಮಗು ಇತ್ತು. ನಿನ್ನೆ ಹೊಸ ವರ್ಷ ಆಚರಣೆಗಾಗಿ ಮದ್ಯ ಕುಡಿಯಲು ಆರೋಪಿ ರಾಜುಗೆ ಹಣ ಬೇಕಾಗಿದೆ. ಹಣ ಕೊಡುವಂತೆ ಪತ್ನಿ ಸಾರಾಳನ್ನು ಪೀಡಿಸಿದ್ದಾನೆ. ಪತ್ನಿ ಹಣ ಕೊಡದಿದ್ದಾಗ ಏಜೆಂಟ್ ಒಬ್ಬನ ಮೂಲಕ ತನ್ನ 6ತಿಂಗಳ ಮಗುವನ್ನು ಮಾರಾಟ ಮಾಡಲು ಮುಂದಾಗಿದ್ದಾನೆ.
ಗಂಡು ಮಗುವನ್ನು ಬಯಸುವ ದಂಪತಿಗೆ ಕ್ಯಾಚ್ ಹಾಕಿದ ಏಜೆಂಟ್ ಆಫ್ರೀನ್ ಎಂಬಾತ 70 ಸಾವಿರಕ್ಕೆ ಮಗು ಕೊಡಿಸೋದಾಗಿ ವ್ಯವಹಾರ ಮುಗಿಸಿದ್ದಾನೆ. ಈ ವಿಷಯ ಪೊಲೀಸರಿಗೆ ತಿಳಿದು ಇಬ್ಬರೂ ಆರೋಪಿಗಳ ಚಲನವಲನಗಳನ್ನು ಫಾಲೋ ಮಾಡಿದ್ದಾರೆ. ನಂತರ ಮಗು ಮಾರಾಟ ಮಾಡಿದ ಸ್ಥಳದಲ್ಲೇ ಏಜೆಂಟ್ ಹಾಗೂ ಪಾಪಿ ಅಪ್ಪನನ್ನು ಅರೆಸ್ಟ್ ಮಾಡಿದ್ದಾರೆ. ಇಬ್ಬರ ಮೇಲೂ ಕೇಸ್ ಹಾಕಿದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
PublicNext
01/01/2021 03:30 pm