ಚಂಡೀಗಢ: ಮದುವೆಯಾಗಲು ಹೊರಟಿದ್ದ ಜೋಡಿಯನ್ನು ನಡು ರಸ್ತೆಯಲ್ಲೇ ಗುಂಡಿಕ್ಕಿ ಕೊಲೆಗೈದ ಘಟನೆ ಹರಿಯಾಣದ ರೋಹ್ಟಕ್‌ನಲ್ಲಿ ನಡೆದಿದ್ದು, ಇದೊಂದು ಮರ್ಯಾದಾ ಹತ್ಯೆ ಎಂಬ ಶಂಕೆ ವ್ಯಕ್ತವಾಗಿದೆ.
ಕೊಲೆಯಾದ ಯುವಕ 25 ವರ್ಷವನಾಗಿದ್ದು, ಯುವತಿಗೆ 27 ವರ್ಷದವಳಾಗಿದ್ದಾಳೆ. ಇವರಿಬ್ಬರು ಒಬ್ಬರನ್ನು ಪ್ರೀತಿಸುತ್ತಿದ್ದು, ಕಾನೂನಿ ಪ್ರಕಾರ ಮದುವೆಯಾಗಲು ತಿಳಿಸಿದ್ದರು. ಇವರಿಬ್ಬರ ನಡುವೆ ವಯಸ್ಸಿನ ಅಂತರವಿರುವ ಕಾರಣ ಇಬ್ಬರ ಪ್ರೀತಿಗೆ ಯುವತಿಯ ಮನೆಯವರ ವಿರೋಧ ಮೊದಲಿನಿಂದಲೂ ಇತ್ತು ಎಂದು ವರದಿಯಾಗಿದೆ.
ಜೋಡಿಯು ಬುಧವಾರ ಮದುವೆ ರೋಹ್ಟಕ್‌ನ ನ್ಯಾಯಾಲಯಕ್ಕೆ ತೆರಳುತ್ತಿದ್ದರು. ಈ ವೇಳೆ ಯುವತಿಯ ತಂದೆ ಹಾಗೂ ಸಂಬಂಧಿಕರು ಹಾಡಹಗಲೇ ನಡು ರಸ್ತೆಯಲ್ಲಿ ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮ ಯುವ ಜೋಡಿ ಸಾವನ್ನಪ್ಪಿದ್ದು, ಯುವಕನ ಸಹೋದರ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ರೋಹ್ಟಕ್ ಪೊಲೀಸರು ತಿಳಿಸಿದ್ದಾರೆ.
PublicNext
31/12/2020 12:46 pm