ಬೆಳಗಾವಿ: ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿದ್ದ ಕನ್ನಡ ಧ್ವಜಸ್ತಂಭವನ್ನು ಕೆಲ ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ.
ಘಟನೆಯ ಬಗ್ಗೆ ಕನ್ನಡ ಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಚೆನ್ನಮ್ಮ ಪುತ್ಥಳಿ ಪಕ್ಕದಲ್ಲಿ ಐದು ಅಡಿ ಎತ್ತರದ ಕನ್ನಡ ಧ್ವಜಸ್ತಂಭವಿತ್ತು. ಕನ್ನಡ ಸಂಘಟನೆಗಳ ಕ್ರಿಯಾಸಮಿತಿ ಸದಸ್ಯರು ಪ್ರತಿ ಎರಡು ತಿಂಗಳಿಗೊಮ್ಮೆ ಹೊಸದಾದ ಧ್ವಜ ಅಳವಡಿಸುತ್ತಲೇ ಇದ್ದರು. ಇದೀಗ ಧ್ವಜ ಹಾಗೂ ಕಂಬವನ್ನು ಧ್ವಂಸಗೊಳಿಸುವ ಜತೆಗೆ ಧ್ವಜವನ್ನು ಕಿತ್ತುಕೊಂಡು ಹೋಗಲಾಗಿದ್ದು, ಈ ಕೃತ್ಯ ಕನ್ನಡ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದು, ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸುತ್ತಿದ್ದಾರೆ.
PublicNext
29/12/2020 04:49 pm