ಬೆಂಗಳೂರು: ಹಣಕಾಸಿನ ವಿವಾದದ ಕಾರಣದಿಂದಾಗಿ 24 ವರ್ಷದ ಯುವಕನೊಬ್ಬನನ್ನು ಆತನ ರೂಮೇಟ್ ಹತ್ಯೆ ಮಾಡಿರುವ ಘಟನೆ ವಿಜಯನಗರದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಈ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.ಇರ್ಪಾನ್(24) ಮೃತಪಟ್ಟ ಯುವಕನಾಗಿದ್ದಾನೆ. ಇರ್ಪಾನ್ ಮತ್ತು ಆತನ ರೂಮೇಟ್ ನವೀನ್ ನಡುವೆ ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ಜಗಳ ನಡೆದಿದೆ. ಇದೇ ಜಗಳ ವಿಕೋಪಕ್ಕೆ ತಿರುಗಿ ನವೀನ್, ಇರ್ಪಾನ್ ನನ್ನು ಹತ್ಯೆ ಮಾಡಿರುವುದಾಗಿ ಪಶ್ಚಿಮ ವಲಯ ಡಿಸಿಪಿ ಸಂಜೀವ್ ಎಂ. ಪಾಟೀಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
PublicNext
29/12/2020 03:24 pm