ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾಯಿ ಮರಿಯ ಶಿರಚ್ಛೇದ ಮಾಡಿದ್ದಕ್ಕೆ ಎಫ್ಐಆರ್..!

ಮುಂಬೈ: ಮೂರು ತಿಂಗಳ ನಾಯಿ ಮರಿಯ ರುಂಡ ಕತ್ತರಿಸಿ ವಿಕೃತಿ ತೋರಿದ ಮುಂಬೈ ನಿವಾಸಿಯೊಬ್ಬರ ಮೇಲೆ ಎಫ್ಐಆರ್ ದಾಖಲಾಗಿದೆ‌.

ಮುಂಬೈ ಆನಂದ್ ನಗರದ ದಹಿಸರ್ ಎಂಬ ಪ್ರದೇಶದಲ್ಲಿರುವ ಜಾರಿಮರಿ ಉದ್ಯಾನವನದಲ್ಲಿ ಘಟನೆ ನಡೆದಿದೆ. ನಾಯಿ ಮರಿಯ ಶಿರಚ್ಛೇದ ಮಾಡಿರುವುದನ್ನು ಗಮನಿಸಿದ ಸ್ಥಳೀಯ ವ್ಯಕ್ತಿ ನೀಡಿದ ಮಾಹಿತಿ ಅನುಸಾರ ಪೊಲೀಸರು ಸ್ಥಳಕ್ಕೆ ತೆರಳಿ ನಾಯಿ ಮರಿಯ ಮೃತದೇಹ ವಶಕ್ಕೆ ಪಡೆದಿದ್ದಾರೆ.

ಈ ಘಟನೆ ವಿರುದ್ಧ ಪ್ರಾಣಿ ದಯಾ ಸಂಘಟನೆ ದೂರು ನೀಡಿದ ಹಿನ್ನಲೆ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.

Edited By : Nagaraj Tulugeri
PublicNext

PublicNext

29/12/2020 03:17 pm

Cinque Terre

88.83 K

Cinque Terre

2

ಸಂಬಂಧಿತ ಸುದ್ದಿ