ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

51 ವರ್ಷದ ಹೆಂಡತಿಯನ್ನು ಕೊಂದ 28 ವರ್ಷದ ಗಂಡ

ಕೇರಳ : 51 ವರ್ಷದ ಪತ್ನಿಗೆ ಕರೆಂಟ್ ಶಾಕ್ ನೀಡಿದ 28 ವರ್ಷದ ಗಂಡ ಆಕೆಯನ್ನು ಕೊಲೆ ಮಾಡಿರುವ ಘಟನೆ ತಿರುವನಂತಪುರಂ ಜಿಲ್ಲೆಯ ಕರಕ್ಕೋಣಂ ಬಳಿ ನಡೆದಿದೆ.

ಸಖಾ ಕುಮಾರಿ (51) ಎಂಬುವರು ಸುಮಾರು ಎರಡು ತಿಂಗಳ ಹಿಂದೆ ಅರುಣ್ (28) ಎಂಬುವರನ್ನು ಮದುವೆಯಾಗಿದ್ದರು. ಅರುಣ್ ಅವರ ವೈವಾಹಿಕ ಜೀವನ ಸಂತೋಷವಾಗಿರಲಿಲ್ಲ ಮತ್ತು ದಂಪತಿ ನಡುವೆ ಆಗಾಗ ಜಗಳವಾಗುತ್ತಿತ್ತು.

ಶನಿವಾರ ಬೆಳಗ್ಗೆ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಮನೆ ಅಲಂಕರಿಸುವ ವೇಳೆ ಪತ್ನಿ ಸಖಾ ಕುಮಾರಿ ಕರೆಂಟ್ ಶಾಕ್​ ತಗುಲಿದೆ ಎಂದು ಅರುಣ್ ಅಕ್ಕಪಕ್ಕದ ಮನೆಯವರಿಗೆ ತಿಳಿಸಿದ್ದರು. ಅವರ ಸಹಾಯದಿಂದ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ ಎಂದು ಪೊಲಿಸ್ ಮೂಲಗಳಿಂದ ಮಾಹಿತಿ ಇದೆ.

ಘಟನೆಯ ಬಗ್ಗೆ ಆಸ್ಪತ್ರೆಯ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ನಂತರ ಅರುಣ್ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಚಾರಣೆ ವೇಳೆ ಹೆಂಡತಿಯನ್ನು ಕೊಲೆ ಮಾಡಿದ್ದಾಗಿ ಆರೋಪಿ ಅರುಣ್‌ ತಪ್ಪೊಪ್ಪಿಕೊಂಡಿದ್ದಾನೆ.

Edited By : Nagaraj Tulugeri
PublicNext

PublicNext

28/12/2020 07:35 am

Cinque Terre

76.62 K

Cinque Terre

10