ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಂಡ ವಸೂಲಿ ಮಾಡ್ತಿದ್ದ ನಕಲಿ ಮಾರ್ಷಲ್ ಬಂಧನ

ಬೆಂಗಳೂರು: ಮಾಸ್ಕ್ ಹಾಕದೇ ಸಾರ್ವಜನಿಕ ಪ್ರದೇಶಗಳಲ್ಲಿ ಓಡಾಡುವವರನ್ನು ತಡೆದು ಮಾರ್ಷಲ್ ಗಳು ದಂಡ ವಿಧಿಸುತ್ತಿರುವ ವಿಚಾರ ನಿಮಗೆಲ್ಲ ಗೊತ್ತೇ ಇದೆ. ಆದರೆ ಬೆಂಗಳೂರಿನ ಜಯನಗರ ಒಂದನೇ ಬ್ಲಾಕ್‌ನಲ್ಲಿ ಯುವಕನೋರ್ವ ತಾನೇ ಮಾರ್ಷಲ್ ಎಂದು ಹೇಳಿಕೊಂಡು ಸಾರ್ವಜನಿಕರಿಂದ ದಂಡ ವಸೂಲಿ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

ಕಿರಣ್ (19) ಎಂಬಾತನೇ ಈ ನಕಲಿ ವ್ಯಕ್ತ ಮಾರ್ಷಲ್. ಈತ ಜಯನಗರ ಒಂದನೇ ಬ್ಲಾಕ್‌ನಲ್ಲಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ.

ಸರಿಯಾಗಿ ಮಾಸ್ಕ್‌ ಧರಿಸದೆ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಓಡಾಡುತ್ತಿದ್ದವರಿಂದ ಹಣ ಸಂಗ್ರಹ ಮಾಡುತ್ತಿದ್ದ ಆರೋಪದ ಮೇಲೆ ಮಾರ್ಷಲ್‌ಗಳು ಕಿರಣ್ ಎಂಬ ಯುವಕನನ್ನು ತಿಲಕ್‌ ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.

Edited By : Nagaraj Tulugeri
PublicNext

PublicNext

26/12/2020 06:04 pm

Cinque Terre

115.96 K

Cinque Terre

2

ಸಂಬಂಧಿತ ಸುದ್ದಿ