ಲಕ್ನೋ: ಸೆಕ್ಯೂರಿಟಿ ಗಾರ್ಡ್ ಒಬ್ಬರು ಅಪಾರ್ಟ್ಮೆಂಟ್ ಗೇಟ್ ಬಾಗಿಲು ತೆಗೆಯೋದು ತಡವಾಗಿದ್ದಕ್ಕೇ ಮಹಿಳಾ ಪ್ರೊಫೆಸರ್ ಸಿಬ್ಬಂದಿಯ ಕಾಲರ್‌ಪಟ್ಟಿ ಹಿಡಿದು ಎಳೆದಾಡಿದ್ದಾಳೆ. ಅಲ್ಲದೇ ಬಾಯಿಗೆ ಬಂದಂತೆ ಬೈದು ನಿಂದಿಸಿದ್ದಾಳೆ.
ನೊಯ್ಡಾದ ಸೆಕ್ಟರ್ 121 ರಲ್ಲಿರುವ ಕ್ಲಿಯೋ ಕೌಂಟಿಯಲ್ಲಿ ಘಟನೆ ನಡೆದಿದ್ದು, ಕಳೆದ ಒಂದು ತಿಂಗಳಲ್ಲಿ ಇದು ನೊಯ್ಡಾದಲ್ಲಿ ನಡೆದ 2ನೇ ಘಟನೆಯಾಗಿದೆ. ಮಹಿಳಾ ಪ್ರೊಫೆಸರ್ ಸುತಾಪ್ ದಾಸ್ ಎಂಬಾಕೆಯೇ ತನ್ನ ಕಾರಿನಿಂದ ಇಳಿದು ಭದ್ರತಾ ಸಿಬ್ಬಂದಿ ಸಚಿನ್‌ಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ದೃಶ್ಯಾವಳಿ ಸಿಸಿಟಿಯಲ್ಲಿ ಸೆರೆಯಾಗಿದೆ.
PublicNext
12/09/2022 04:09 pm