ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕ್ಲಿನಿಕ್ ಬಾಗಿಲು ತೆರೆಯಲು ವಿಳಂಬವಾಗಿದಕ್ಕೆ ವೈದ್ಯನನ್ನು ಹಿಗ್ಗಾಮುಗ್ಗಾ ಥಳಿಸಿದ ಜನರ ಗುಂಪು; ವಿಡಿಯೋ ವೈರಲ್‌

ಮಹಾರಾಷ್ಟ್ರ: ಸೆಪ್ಟೆಂಬರ್ 6 ರಂದು ಮಹಾರಾಷ್ಟ್ರದ ಬಾರಾಮತಿಯಲ್ಲಿ ಗುಂಪೊಂದು ವೈದ್ಯ ಹಾಗೂ ಆತನ ಮಗನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಕ್ಲಿನಿಕ್ ಬಾಗಿಲು ತೆರೆಯಲು ವಿಳಂಬವಾಗಿದ್ದಕ್ಕೆ ಆಕ್ರೋಶಗೊಂಡ ಕೆಲವರು ಈ ಕೃತ್ಯವೆಸಗಿದ್ದಾರೆ.

ಹಲ್ಲೆ ನಡೆಸಿರುವ ದೃಶ್ಯಾವಳಿ ಕ್ಲಿನಿಕ್‌ನಲ್ಲಿ ಅಳವಡಿಸಲಾಗಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ. ವೈದ್ಯ ಯುವರಾಜ್ ಗಾಯಕ್ವಾಡ್ ಅವರ ಮನೆಯ ಹೊರಗಿರುವ ಕ್ಲಿನಿಕ್‌ನಲ್ಲಿ ಈ ಘಟನೆ ನಡೆದಿದೆ.

ಯುವರಾಜ್ ಅವರು ಸೆಪ್ಟೆಂಬರ್ 6ರ ರಾತ್ರಿ ತಮ್ಮ ಕುಟುಂಬದೊಂದಿಗೆ ಊಟ ಮಾಡುತ್ತಿದ್ದಾಗ ಅವರ ಮನೆ ಬಾಗಿಲು ಜೋರಾಗಿ ಬಡಿಯುವ ಶಬ್ಧ ಕೇಳಿದೆ. ಈ ವೇಳೆ ಬಾಗಿಲು ತೆಗೆಯುವುದು ಸ್ವಲ್ಪ ತಡವಾಗಿದೆ. ಇದರಿಂದ ಆಕ್ರೋಶಗೊಂಡ ಗುಂಪು ಕಿಟಕಿಯ ಗಾಜು ಒಡೆದು ಒಳಗೆ ನುಗ್ಗಿದೆ.

Edited By : Abhishek Kamoji
PublicNext

PublicNext

11/09/2022 05:20 pm

Cinque Terre

102.34 K

Cinque Terre

2