ಲಖನೌ: ಪಾರ್ಕ್ನಲ್ಲಿ ಆಟವಾಡುತ್ತಿದ್ದ ಬಾಲಕನ ಮೇಲೆ ಪಿಟ್ಬುಲ್ ನಾಯಿಯೊಂದು ದಾಳಿ ಮಾಡಿದ್ದು, ಬಾಲಕನ ಮುಖದ ಮೇಲೆ ಸುಮಾರು 200 ಗಾಯಗಳಾಗಿವೆ. ಈ ಘಟನೆ ಕಳೆದ ವಾರ ಘಾಜಿಯಾಬಾದ್ನಲ್ಲಿ ನಡೆದಿದೆ.
ಮನೆಯ ಹತ್ತಿರದ ಪಾರ್ಕ್ನಲ್ಲಿ ಆಟವಾಡುತ್ತಿದ್ದ ವೇಳೆ ನಾಯಿ ದಾಳಿ ಮಾಡಿದೆ. ಬಾಲಕನನ್ನು ಪುಷ್ಪ್ ತ್ಯಾಗಿ ಎಂದು ಗುರುತಿಸಲಾಗಿದೆ. ಹುಡುಗಿಯೊಬ್ಬಳು ಪಿಟ್ಬುಲ್ ನಾಯಿಯೊಂದಿಗೆ ಪಾರ್ಕ್ನಲ್ಲಿ ವಾಕಿಂಗ್ ಮಾಡುವಾಗ ಅಲ್ಲಿಯೇ ಆಟವಾಡುತ್ತಿದ್ದ ಬಾಲಕನ ಮೇಲೆ ಪಿಟ್ಬುಲ್ ದಾಳಿ ಮಾಡಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಒಬ್ಬ ವ್ಯಕ್ತಿ ಬಾಲಕನನ್ನು ರಕ್ಷಿಸುತ್ತಿರುವುದು ವಿಡಿಯೋದಲ್ಲಿದೆ. ಅಷ್ಟರಲ್ಲಾಗಲೇ ಪುಷ್ಪ್ ಮುಖದ ಒಂದು ಭಾಗವನ್ನು ನಾಯಿ ಕಚ್ಚಿತ್ತು. ಯಾವುದೇ ಪರವಾನಗಿ ಅಥವಾ ನೋಂದಣಿ ಇಲ್ಲದೆ ಪ್ರಾಣಿಯನ್ನು ಸಾಕಿದ ನಾಯಿಯ ಮಾಲೀಕರಿಗೆ 5000 ರೂ ದಂಡ ವಿಧಿಸಲಾಗಿದೆ.
PublicNext
10/09/2022 05:23 pm