ಮಥುರಾ: ತಾಯಿಯೊಂದಿಗೆ ಹಾಯಾಗಿ ಮಲಗಿದ್ದ ಮಗುವನ್ನು ವ್ಯಕ್ತಿಯೊಬ್ಬ ಅಪಹರಿಸಿದ್ದಾನೆ. ಉತ್ತರ ಪ್ರದೇಶದ ಮಥುರಾ ನಗರದ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.
ಮಥುರಾ ರೈಲ್ವೇ ಪೊಲೀಸ್ ಅಧಿಕಾರಿ ಸಚಿನ್ ಕೌಶಿಕ್ ಅವರು ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಮಗು ಮಲಗಿರುವುದನ್ನು ನೋಡಿದ ವ್ಯಕ್ತಿ ಅತ್ತಿತ್ತ ನೋಡಿದ್ದಾನೆ. ಯಾರೂ ಇಲ್ಲದ್ದನ್ನು ಗಮನಿಸಿ ಮಗುವನ್ನು ಅಪಹರಿಸಿ ಪರಾರಿಯಾಗಿದ್ದಾನೆ. ಈತನನ್ನು ಶೀಘ್ರದಲ್ಲಿ ಪತ್ತೆ ಹಚ್ಚೋದಾಗಿ ರೈಲ್ವೇ ಪೊಲೀಸರು ತಿಳಿಸಿದ್ದಾರೆ.
PublicNext
28/08/2022 03:50 pm