ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟೀಚರಮ್ಮ ಇದೇನಮ್ಮ-ವಿದ್ಯಾರ್ಥಿ ನಿಮ್ಗೆ ಮಸಾಜ್ ‌ಮಾಡ್ಬೇಕೇ ?

ಲಖನೌ: ಶಿಕ್ಷಕಿಯೊಬ್ಬರು ತಮ್ಮ ವಿದ್ಯಾರ್ಥಿಯಿಂದಲೇ ಮಸಾಜ್ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ಹರ್ದೋಯ್‌ನಲ್ಲಿರೋ ಫೊಖಾರಿ ಸರ್ಕಾರಿ ಶಾಲೆಯಲ್ಲಿ ನಡೆದಿತ್ತು. ಆ ವೀಡಿಯೋ ಕೂಡ ವೈರಲ್ ಆಗಿದೆ.

ಹೌದು. ಶಿಕ್ಷಕರಿಯೊಬ್ಬರು ಚೇರ್ ಮೇಲೆ ಕುಳಿತುಕೊಂಡಿದ್ದಾರೆ. ವಿದ್ಯಾರ್ಥಿಯೊಬ್ಬ ಶಿಕ್ಷಕಿಯ ಪಕ್ಕ ನಿಂತು ಮಸಾಜ್ ಮಾಡುತ್ತಿದ್ದಾನೆ.

ಉಳಿದ ವಿದ್ಯಾರ್ಥಿಗಳೋ ಆರಾಮಾಗಿಯೇ ಕೊಠಡಿಯಲ್ಲಿ ಓಡಾಡಿಕೊಂಡಿದ್ದಾರೆ. ಈ ವಿದ್ಯಾರ್ಥಿಗಳ ಮೇಲೆ ಶಿಕ್ಷಕಿ ಸಿಟ್ಟು ಕೂಡ ಮಾಡಿಕೊಂಡಿದ್ದಾರೆ. ಇವರ ಮೇಲೆ ಶಿಕ್ಷಕಿ ಕೋಪಗೊಂಡಿರೋದು ದೃಶ್ಯದಲ್ಲಿ ಸೆರೆಯಾಗಿದೆ.

ಈ ವೀಡಿಯೋ ವೈರಲ್ ಆದ ಬೆನ್ನಲ್ಲಿಯೇ ಶಿಕ್ಷಕಿಯನ್ನ ಅಮಾನತು ಮಾಡಲಾಗಿದೆ.

Edited By :
PublicNext

PublicNext

29/07/2022 01:21 pm

Cinque Terre

60.49 K

Cinque Terre

1