ವಿಜಯಪುರ: ಆಲಮಟ್ಟಿಯ ವ್ಯಾಪ್ತಿಯಲ್ಲಿ ಬುರ್ಖಾಧಾರಿ ಮಹಿಳೆಯ ಸಂಚಾರ ಮಾಡಿದ್ದಾಳೆ. ಈಕೆಯ ಅನುಮಾನಾಸ್ಪದ ಓಡಾಟ ಇಲ್ಲಿ ಆತಂಕ ಹುಟ್ಟಿಸಿತ್ತು. ಆದರೆ, ಇದರ ಅಸಲಿ ಕಥೆ ಬೇರೆನೆ ಇದೆ. ಅದು ಈಗ ಬಹಿರಂಗೊಂಡಿದೆ.
ಸೋಮವಾರ ಬೆಳಗ್ಗೆ ಮಹಿಳೆಯೊಬ್ಬಳು ಬುರ್ಖಾಧರಿಸಿ ಇಲ್ಲಿ ಓಡಾಡುತ್ತಿದ್ದಳು. ಇಲ್ಲಿದ್ದವರಿಗೆ ಕೊಂಚ ಭಯ ಕೂಡ ಆಯಿತು. ಅಲ್ಲಿಯೇ ಇದ್ದ ಮುಳ್ಳು ಕಟ್ಟಿ ಬಳಿ ಹೋಗಿ ಬುರ್ಖಾ ತೆಗೆದು ಬಂದಾಗ ಆಕೆ ಆಕೆ ಅಲ್ಲ. ಅವನು ಅಂತ ಗೊತ್ತಾಗಿದೆ.
ಆದರೆ, ಇದು ಕೂಡ ಸತ್ಯ ಅಲ್ಲವೇ ಅಲ್ಲ.ಯಾಕೆಂದ್ರೆ, ಪೊಲೀಸರು ಈ ವ್ಯಕ್ತಿಯನ್ನ ವಿಚಾರಿಸಿದಾಗ ಈತ ಅವನೂ ಅಲ್ಲ ಅವಳು ಅಲ್ಲ ಅನ್ನೋದು ತಿಳಿದು ಹೋಗಿದೆ. ನಿಜ, ಈಕೆ ಮಂಗಳಮುಖಿ.ಮನೆಯಲ್ಲಿ ಮದ್ವೆ ಮಾಡುತ್ತೇನೆ ಎಂದರು. ಅದಕ್ಕೆ ಇಲ್ಲಿಗೆ ಓಡಿ ಬಂದ ಅಂತಲೆ ಈ ಮಂಗಳ ಮುಖಿ ಹೇಳಿದ್ದಾಳೆ.
ಈ ಬಗ್ಗೆ ಎಸ್.ಪಿ.ಆನಂದಕುಮಾರ್ ನಿಖರ ಮಾಹಿತಿ ನೀಡಿದ್ದಾರೆ. ಈ ಮಂಗಳಮುಖಿ ಹೆಸರು ಕಿಶೋರ್.ಬೆಂಗಳೂರಿನ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಈ ಕುರಿತು ಎಲ್ಲ ಖಚಿಪಡಿಸಿಕೊಳ್ಳಲಾಗಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಅಂತಲೇ ಎಸ್.ಪಿ.ಆನಂದಕುಮಾರ್ ತಿಳಿಸಿದ್ದಾರೆ.
PublicNext
25/07/2022 06:23 pm