ಬೂಂದಿ:ನಮ್ಮ ಪ್ರವಾದಿ ಮೊಹಮ್ಮದ್ ವಿರುದ್ಧ ಯಾರೂ ಮಾತನಾಡೋ ಹಾಗಿಲ್ಲ.ಮಾತನಾಡಿದರೆ ಅವರ ವಿರುದ್ಧ ಆಕ್ಷನ್ ತೆಗೆದುಕೊಳ್ಳಲೇಬೇಕು. ಇಲ್ಲ ಅಂದ್ರೆ ನಾವು ರಿಯಾಕ್ಷನ್ ಕೊಡಬೇಕಾಗುತ್ತದೆ ಎಂದು ಮೌಲ್ವಿಯೊಬ್ಬ ಬೂಂದಿನಗರದಲ್ಲಿ ಓಪನ್ ಆಗಿಯೇ ಎಚ್ಚರಿಕೆ ಕೊಟ್ಟಿದ್ದಾನೆ.
ಈ ಮೌಲ್ವಿಯ ಹೇಳಿಕೆಯ ವೀಡಿಯೋವನ್ನ ಮರಾಠಿ ನಟಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಕೇತಕಿ ಚಿತಾಲೆ ಶೇರ್ ಮಾಡಿದ್ದಾರೆ. ಇಂತಹ ಮೌಲ್ವಿಗಳ ವಿರುದ್ಧ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳದೇ ಬಿಟ್ಟಿರೋದು ದುರಂತವೇ ಸರಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇಂತಹ ಮೌಲ್ವಿ ವಿರುದ್ಧ ಕ್ರಮ ತೆಗೆದುಕೊಂಡಿದ್ದರೇ, ಧರ್ಮದ ಹೆಸರಿನಲ್ಲಿ ಹತ್ಯೆ ಆಗುತ್ತಿರಲಿಲ್ಲ ಅಂತಲೇ ಹೇಳಿರೋ ಚಿತಾಲೆ, ಸದ್ಯಕ್ಕೆ ರಾಜಸ್ಥಾನದ ಸರ್ಕಾರಕ್ಕೆ ವೋಟ್ ಬ್ಯಾಂಕ್ ಅತಿ ಮುಖ್ಯವಾಗಿದೆ ಅಂತಲೂ ಟೀಕಿಸಿದ್ದಾರೆ.
PublicNext
30/06/2022 06:05 pm