ಭೋಪಾಲ್: ಬಹುತೇಕರು ಶ್ವಾನಗಳನ್ನು ಅತೀಯಾಗಿ ಪ್ರತಿಸುತ್ತಾರೆ, ಮುದ್ದಿಸುತ್ತಾರೆ, ಮನೆಯಲ್ಲಿಯೇ ಸಾಕುತ್ತಾರೆ. ಆದರೆ ಇಲ್ಲೊಂದು ವಿಡಿಯೋದಲ್ಲಿ ನಾಯಿಗಳ ರಾಕ್ಷಸ ಬುದ್ದಿಯನ್ನು ನೋಡಿದ್ರೆ ನಮಗೆ ನಾಯಿ ಸಹವಾಸ ಬೇಕೆ ಎನಿಸದೇ ಇರಲಾರದು.
ಹೌದು ಸಾಕು ನಾಯಿಗೂ ಬೀದಿ ನಾಯಿಗಳಿಗೂ ಸಾಕಷ್ಟು ವ್ಯತ್ಯಾಸಗಳಿರಬಹುದು ಆದರೆ ಈ ನಾಯಿಯ ರಾಕ್ಷಸತನ ಕಂಡು ನಡುಗದವರಿಲ್ಲ.
ಜ.1 ಶನಿವಾರ ಮಧ್ಯಾಹ್ನ ಭೋಪಾಲ್ ನ ಬ್ಯಾಗ್ ಸೆವಾನಿಯಾ ಪ್ರದೇಶದಲ್ಲಿ ಬೀದಿನಾಯಿಗಳ ಗುಂಪೊಂದು 4 ವರ್ಷದ ಬಾಲಕಿಯನ್ನು ನಡುರಸ್ತೆಯಲ್ಲಿ ಎಳೆದಾಡಿದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸದ್ಯ ನಾಯಿ ದಾಳಿಯಿಂದ ತೀವ್ರವಾಗಿ ಗಾಯಗೊಂಡ ಬಾಲೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಿಡಿಯೋದಲ್ಲಿ ಗಮನಿಸುವಂತೆ ಬಾಲಕಿಯನ್ನು ತಿಂದು ತೇಗಲೆಂದೇ ನಾಯಿಗಳು ದಾಳಿ ಮಾಡಿದಂತಿವೆ. ಐದು ನಾಯಿಗಳ ಹಿಂಡು ಕಂಡು ಮಗು ಗಾಬರಿಂದ ಓಡುತ್ತಾಳೆ ಅವಳನ್ನು ಅಟ್ಟಿಸಿಕೊಂಡ ಬಂದ ನಾಯಿಗಳು ಬಾಲಕಿಯ ತಲೆ ಮತ್ತು ಮುಖವನ್ನು ಕಚ್ಚಿವೆ. ಈ ವೇಳೆ ಬಾಲಕಿಯ ಕೂಗಾಟ ಕೇಳಿದ ದಾರಿಹೋಕನೊಬ್ಬ ನಾಯಿಗಳಿಂದ ಬಾಲಕಿಯನ್ನು ರಕ್ಷಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಭಾರಿ ವೈರಲ್ ಆಗುತ್ತಿದ್ದರು ಅಲ್ಲಿನ ಪಾಲಿಕೆಯವರು ಬೀದಿ ನಾಯಿ ಹಾವಳಿ ಹತೋಟಿಗೆ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗದಿರುವುದೇ ವಿಪರ್ಯಾಸ.
PublicNext
03/01/2022 07:06 pm