ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಯಾಣಿಕರೇ ಎಚ್ಚರ..ಎಚ್ಚರ..ಎಚ್ಚರ..

ನಿತ್ಯ ಸೋಷಿಯಲ್ ಮಿಡಿಯಾ ಹತ್ತಾರು ವಿಡಿಯೋಗಳು ವೈರಲ್ ಆಗುತ್ತವೆ. ಕೆಲವು ಕಾಮಿಡಿಯ ವಿಡಿಯೋಗಳಾದರೆ ಮತ್ತೆ ಕೆಲವು ಎಚ್ಚರದಿಂದರಲು ಸಂದೇಶ ಸಾರುವಂತವುಗಳಾಗಿರುತ್ತವೆ.

ಸದ್ಯ ವೈರಲ್ ಆದ ವಿಡಿಯೋದಲ್ಲಿ ಕಳ್ಳನೊಬ್ಬ ಪ್ರಯಾಣದ ವೇಳೆ ಮತ್ತೊಬ್ಬ ಪ್ರಯಾಣಿಕನ ಬ್ಯಾಗ್ ಕದ್ದು ಎಸ್ಕೇಪ್ ಆಗಿದ್ದಾನೆ.

ವಿಡಿಯೋದಲ್ಲಿ ಅಮಾಯಕನಂತೆ ಬಸ್ ಹತ್ತುವ ಆಸಾಮಿ ಮುಂದಿನ ಸೀಟ್ ನಲ್ಲಿ ಕುಳಿತ ಪ್ರಯಾಣಿಕರು ಬ್ಯಾಗ್ ಅನ್ನು ಲಗೇಜ್ ಕ್ಯಾರಿಯರ್‌ನಲ್ಲಿ ಇಟ್ಟಿದ್ದನ್ನು ಗಮನಿಸಿ ನಿಧಾನವಾಗಿ ಆ ಬ್ಯಾಗ್ ಅನ್ನು ಎಗರಿಸಿ ಎಸ್ಕೇಪ್ ಆಗಿದ್ದಾನೆ.

ವೈರಲ್ ಆಗಿರುವ ವಿಡಿಯೋ ಎಲ್ಲಿ ನಡೆದಿದ್ದು ಎನ್ನುವ ಮಾಹಿತಿ ಲಭ್ಯವಾಗಿಲ್ಲ. ಆದರೆ ಪ್ರಯಾಣ ಮಾಡುವಾಗ ಜೋಕೆ ಎನ್ನುವ ಸಂದೇಶ ಸಾರಿದೆ.

Edited By : Shivu K
PublicNext

PublicNext

31/08/2021 02:31 pm

Cinque Terre

96.2 K

Cinque Terre

1

ಸಂಬಂಧಿತ ಸುದ್ದಿ