ಬಾಲಿವುಡ್ ನಟ ಸುಶಾಂತ್ ಸಿಂಗ್ ಸಂಶಯಾಸ್ಪದ ಸಾವಿನ ಪ್ರಕರಣದ ತನಿಖೆಯ ನಂತರ ಎನಸಿಬಿ ಪೊಲೀಸ್ ಅಧಿಕಾರಿಗಳೀಗ ಡ್ರಗ್ಸ್ ಮಾಫಿಯಾ ಕುರಿತು ತನಿಖೆ ಕೈಗೊಂಡಿದ್ದು ಈ ಸಂಬಂಧ ಮತ್ತೊಂದು ವ್ಯಕ್ತಿಯನ್ನ ಬಂಧನಕ್ಕೆ ಒಳಪಡಿಸಿದ್ದಾರೆ.
ಈತ ಬಾಲಿವುಡ್ ಸೇರಿದಂತೆ ಮತ್ತೀತರ ಟಾಪ್ ಸೆಲೆಬ್ರಿಟಿಗಳ ಜೊತೆ ಸಂಪರ್ಕ ಹೊಂದಿದ್ದಾನೆ ಎನ್ನಲಾಗುತ್ತಿದ್ದು ಬಂಧಿತ ಆರೋಪಿ ಸಮೀರ್ ವಾಂಕೇಡ್ ವರ್ಸೋವಾ ರಾಹಿಲ್ ವಿಶ್ರಮ್ ಎಂದು ತಿಳಿದು ಬಂದಿದೆ.
ಸದ್ಯ ಆತನ ಬಳಿಗಿದ್ದ 900 ಗ್ರಾಂ ಚಾರಸ್ ಎಂಬ ಮಾದಕವಸ್ತು 4.5 ಲಕ್ಷ ರೂಪಾಯಿಯನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದು ಸುಶಾಂತ್ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಅನುಜ್ ಕೇಶ್ವಾನಿ ವಿಚಾರಣೆಯ ಸಂದರ್ಭದಲ್ಲಿ ಈತನ ಹೆಸರು ಅಧಿಕಾರಿಗಳ ಸಂಪರ್ಕಕ್ಕೆ ಬಂದಿದೆ.
ಈಗಾಗಲೇ ರಾಹಿಲ್ ಬಾಲಿವುಡ್ ತಾರೆಗಳಿಗೆ ತಾನು ಡ್ರಗ್ಸ್ ಸಪ್ಲೈ ಮಾಡುತ್ತಿದ್ದೆ ಎಂದು ಒಪ್ಪಿಕೊಂಡಿದ್ದು ಇತರರ ಹೆಸರನ್ನು ಬಾಯ್ಬಿಟ್ಟಿದ್ದು ಈ ಡ್ರಗ್ಸ್ ಆರೋಪಿಗಳ ಸರದಿ ಬೆಳೆಯುವ ರೀತಿಯಲ್ಲಿ ಕಾಣುತ್ತಿದೆ.
PublicNext
19/09/2020 11:13 am