ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಬುರಗಿಯಲ್ಲಿ ಕೇಳಿದ ಗುಂಡಿನ ಸದ್ದು : ಆರೋಪಿ ಆಸ್ಪತ್ರೆಗೆ ಶೀಫ್ಟ್

ಕಲಬುರಗಿ : ಕೊಲೆ ಆರೋಪಿಯ ಮೇಲೆ ಪೊಲೀಸರು ಬೆಳ್ಳಂಬೆಳಗ್ಗೆ ಫೈರಿಂಗ್ ನಡೆಸಿದ್ದಾರೆ.

ಕಲಬುರಗಿಯ ಹೊರವಲಯದ ತಾಜ ಸುಲ್ತಾನಪೂರ ಬಳಿ ಲ್ಲಿ ಗುಂಡಿನ ಸದ್ದು ಕೇಳಿ ಬಂದಿದೆ.

ಮೆಹಬೂಬ್ ನಗರ ನಿವಾಸಿ ಮುದೀನ್(25) ಮೇಲೆ ಕಲಬುರಗಿ ಗ್ರಾಮೀಣ ಠಾಣೆ ಇನ್ಸ್ಪೆಕ್ಟರ್ ಸೋಮಲಿಂಗ್ ಗುಂಡು ಹಾರಿಸಿದ್ದಾರೆ.

ಈ ಹಿಂದೆ ವ್ಯಕ್ತಿಯೋರ್ವನನ್ನು ಕೊಲೆ ಮಾಡಿ ದರೋಡೆ ಮಾಡಿದ್ದ ಮುದೀನ್ನನ್ನು ಕಳೆದ ರಾತ್ರಿ ಪೊಲೀಸರು ಬಂಧಿಸಿದ್ದರು.

ಮಾರಕಾಸ್ತ್ರಗಳನ್ನು ಜಪ್ತಿ ಮಾಡಲು ಆರೋಪಿ ಮುದೀನ್ನನ್ನು ಇಂದು ಮುಂಜಾನೆ ಸ್ಥಳಕ್ಕೆ ಕರೆದೊಯ್ದಿದ್ದರು. ಈ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದಾನೆ.

ಆಗ ಆತ್ಮರಕ್ಷಣೆಗಾಗಿ ಮುದೀನ್ ಕಾಲಿಗೆ ಗುಂಡು ಹಾರಿಸಲಾಗಿದೆ. ಘಟನೆಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತದೆ.

ಹಾಗೂ ಗಾಯಾಳು ಮುದೀನ್ನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

Edited By : Nirmala Aralikatti
PublicNext

PublicNext

07/10/2020 08:50 am

Cinque Terre

69.7 K

Cinque Terre

1

ಸಂಬಂಧಿತ ಸುದ್ದಿ