ಚಂಡೀಗಢ: ತನ್ನ ಪತ್ನಿ, ನಾದಿನಿ ಮತ್ತು ಅತ್ತೆ ಮೂವರನ್ನು ಕೊಲೆಗೈದ ಕಾಮುಕನೊಬ್ಬ, ಮೃತದೇಹಗಳ ಜೊತೆ ಸೆಕ್ಸ್ ಮಾಡಿರುವ ಅಮಾನವೀಯ ಘಟನೆ ಹರಿಯಾಣದ ಪಾಣಿಪತ್ ಜಿಲ್ಲೆಯಲ್ಲಿ ನಡೆದಿದೆ.
ನೂರ್ ಹಸನ್ (27) ಮೃತದೇಹಗಳೊಂದಿಗೆ ಸೆಕ್ಸ್ ನಡೆಸಿದ ಕಾಮುಕ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿ ತ್ರಿವಳಿ ಕೊಲೆ ರಹಸ್ಯವನ್ನು ಭೇದಿಸಿದ್ದಾರೆ. ಆರೋಪಿ ಹಸನ್ ಸೆಪ್ಟೆಂಬರ್ 5 ರಂದು ಮೊದಲು ತನ್ನ ಹೆಂಡತಿ ಮತ್ತು ನಾದಿನಿಯನ್ನು ಕೊಲೆ ಮಾಡಿದ್ದಾನೆ. ನಂತರ ಅವರ ದೇಹಗಳನ್ನು ಬೇರೆ ಬೇರೆ ಸ್ಥಳಗಳಿಗೆ ಎಸೆದಿದ್ದಾನೆ. ಸೆ. 8ರಂದು ಬರ್ಷಮ್ ಗ್ರಾಮದಲ್ಲಿರುವ ತನ್ನ ಅತ್ತೆಯ ಮನೆಗೆ ಹೋಗಿ ಆಕೆಯನ್ನು ಕತ್ತು ಹಿಸುಕಿ ಕೊಂದಿದ್ದಾನೆ. ನಂತರ ಆಕೆಯ ಗುರುತನ್ನು ಪತ್ತೆ ಮಾಡಬಾರದೆಂದು ಮೃತದೇಹವನ್ನು ಸುಡಲು ಪ್ರಯತ್ನಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪತ್ನಿ ಇನ್ನೊಬ್ಬನ ಜೊತೆಗೆ ಸಂಬಂಧ ಹೊಂದಿದ್ದಾಳೆ. ಅದಕ್ಕೆ ಅತ್ತೆ ಕೂಡ ಬೆಂಬಲ ನೀಡುತ್ತಿದ್ದಾಳೆ ಎಂದು ಹಸನ್ ಶಂಕೆ ವ್ಯಕ್ತಪಡಿಸಿದ್ದ. ಈ ಹಿನ್ನೆಲೆ ಕೊಲೆ ಮಾಡಿದ್ದಾನೆ. ಜೊತೆಗೆ ಮೂವರು ಮಹಿಳೆಯರ ಶವಗಳ ಮೇಲೆ ಅತ್ಯಾಚಾರ ಎಸಗಿರುವುದಾಗಿ ವಿಚಾರಣೆ ವೇಳೆ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
PublicNext
25/09/2020 03:58 pm