ಲಕ್ನೋ: ಹತ್ರಾಸ್ ನಲ್ಲಿ ಕಾಮುಕರ ಕೈಯಲ್ಲಿ ನಲುಗಿದ ಯುವತಿ ಮನೀಶಾಗೆ ನ್ಯಾಯ ಒದಗಿಸಿಕೊಡಲು ನಿರ್ಭಯಾ ಪರ ಹೋರಾಡಿದ್ದ ವಕೀಲೆ ಸೀಮಾ ಕುಶ್ವಾಹ್ ಮುಂದೆ ಬಂದಿದ್ದಾರೆ.
ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಕೊನೆಯವರೆಗೂ ಹೋರಾಡಿ ಗೆದ್ದ ವಕೀಲೆ ಸೀಮಾ ಈಗ ಸ್ವಯಂ ಪ್ರೇರಣೆಯಿಂದ ಮನೀಶಾ ಮನೆಗೆ ಭೇಟಿ ನೀಡಲು ನಿರ್ಧರಿಸಿದ್ದು, ಈ ಪ್ರಕರಣದ ಆರೋಪಿಗಳಿಗೆ ಶಿಕ್ಷೆ ಕೊಡಿಸಲು ಪ್ರಯತ್ನಿಸುವುದಾಗಿ ಪಣ ತೊಟ್ಟಿದ್ದಾರೆ.
ಸ್ವ ಹಿತಾಸಕ್ತಿಯಿಂದ ಪ್ರಕರಣದ ಬಗ್ಗೆ ನ್ಯಾಯಾಲಯದಲ್ಲಿ ಹೋರಾಡಲು ಸೀಮಾ ತೀರ್ಮಾನಿಸಿದ್ದಾರೆ.
''ನಾನಿನ್ನು ಅವರ ವಕೀಲೆಯಾಗಿಲ್ಲ, ಸಾಮಾನ್ಯ ವ್ಯಕ್ತಿಯಾಗಿ ಅವರನ್ನು ಭೇಟಿ ಮಾಡಿದರೆ ಕಾನೂನು ಮತ್ತು ಸುವ್ಯವಸ್ಥೆ ಭಂಗ ಹೇಗೆ ಆಗುತ್ತದೆ.
ಇಲ್ಲದ ಕಾನೂನಿನ ಪಾಠವನ್ನು ಸ್ಥಳೀಯ ಆಡಳಿತ ನೀಡುತ್ತಿದೆ'' ವಕೀಲೆ ಸೀಮಾ ಗುಡುಗಿದರು.
PublicNext
02/10/2020 03:13 pm