ನವದೆಹಲಿ: ಪ್ರೀತಿಯ ನಾಟಕವಾಡಿ ಹಿಂದೂ ಯುವತಿಯನ್ನು ಮುಸ್ಲಿಂ ಯುವಕ ಮದುವೆಯಾಗಿದ್ದು ಸದ್ಯ ನಿಜಾಂಶ ತಿಳಿದು ಯುವತಿ ಕಣ್ಣೀರಿಟ್ಟಿದ್ದಾಳೆ.ಹೌದು ದೆಹಲಿಯ ಜ್ಯೋತಿನಗರ ಪ್ರದೇಶದಲ್ಲಿ ನಡೆದ ಘಟನೆ ಇದಾಗಿದ್ದು ಹಿಂದೂ ಯುವತಿ ಅನುಭವಿಸಿದ ಚಿತ್ರಹಿಂಸೆ ಕೇಳಿದ್ರೆ ಮೈ ಜುಮ್ ಎನ್ನತ್ತೆ.
ತಾನು ಹಿಂದೂ ಎಂದು ನಂಬಿಸಿ, ಹಿಂದೂ ಯುವತಿಯನ್ನು ಪ್ರೀತಿ ನಾಟಕವಾಡಿ ಮದುವೆಯಾದ ಮುಸ್ಲಿಂ ವಿವಾಹಿತನೊಬ್ಬನ ಯುವತಿಗೆ ನೀಡಿದ ದೌರ್ಜನ್ಯ ಒಂದೆರಡಲ್ಲ.ವಕೀಲನಾಗಿದ್ದ ಇರ್ಷಾದ್ ಅಲಿ ಬಳಿ ಯುವತಿ ಕೆಲಸಕ್ಕೆ ಬಂದಿದ್ದಾಳೆ. ಆತ ತನ್ನ ಹೆಸರನ್ನು ಗುಡ್ಡು ಚೌಧರಿ ಎಂದು ಹೇಳಿಕೊಂಡಿದ್ದಾನೆ. ನಂತರ ಯುವತಿಯ ಬಳಿ ಪ್ರೇಮ ನಿವೇದನೆ ಮಾಡಿದ್ದಾನೆ. ಇದಾಗಲೇ ಮದುವೆಯಾಗಿ ಮಕ್ಕಳನ್ನೂ ಹೊಂದಿರುವ ಇರ್ಷಾದ್, ತಾನು ಹಿಂದೂ ಎಂದು ಯುವತಿಯನ್ನು ನಂಬಿಸಲು ಕೈ ಮೇಲೆ ದುರ್ಗಾಮಾತೆಯ ಹಚ್ಚೆ ಹಾಕಿಸಿಕೊಂಡಿದ್ದ! ಈತನನ್ನು ನಂಬಿ 2015ರಲ್ಲಿ ಮದುವೆಯನ್ನೂ ಮಾಡಿಕೊಂಡಿದ್ದಾಳೆ.
ಮದುವೆಯಾದ ಮೇಲೆ ಗಂಡನ ನಿಜ ಬಣ್ಣ ತಿಳಿದಿದೆ. ಈತ ಹಿಂದೂ ಅಲ್ಲ ಮುಸ್ಲಿಂ ಎಂದು ತಿಳಿಯುವಷ್ಟರಲ್ಲಿ ಸಮಯ ಮೀರಿ ಹೋಗಿತ್ತು. ಈಕೆಯನ್ನು ಮುಸ್ಲಿಂ ಧರ್ಮಕ್ಕೆ ಮತಾಂತರಗೊಳಿಸಲು ಇನ್ನಿಲ್ಲದ ಹಿಂಸೆ ಕೊಟ್ಟಿದ್ದಾನೆ ಇರ್ಷಾದ್.ಮತಾಂತರಗೊಳ್ಳುವಂತೆ, ದಿನವೂ ನಮಾಜ್ ಮಾಡುವಂತೆ ಪತ್ನಿಯನ್ನು ಒತ್ತಾಯಿಸುತ್ತಿದ್ದ ಇರ್ಷಾದ್ ಆಕೆಯನ್ನು ದೈಹಿಕವಾಗಿಯೂ ಹಿಂಸಿಸಿದ್ದಾನೆ. ಆಕೆಯನ್ನು ಕೂಡಿ ಹಾಕಿ ಚಿತ್ರಹಿಂಸೆ ಕೊಟ್ಟಿದ್ದಾನೆ. ಆತನಿಂದ ತಪ್ಪಿಸಿಕೊಂಡು ಬಂದ ಯುವತಿ ಪೊಲೀಸರಲ್ಲಿ ದೂರು ದಾಖಲಿಸಿದ್ದಾಳೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
PublicNext
20/09/2022 08:31 pm