ಕೋಲಾರ: ಜಿಲ್ಲೆಯ ಮಾಲೂರು ತಾಲೂಕಿನ ಆರ್‌ಎಸ್‌ಎಸ್ ಮುಖಂಡ ರವಿ ಕುಮಾರ್ ಎಂಬುವರ ಮೇಲೆ ಅನ್ಯಕೋಮಿನ ಇಬ್ಬರು ಯುವಕರು ಗಾಂಜಾ ಮತ್ತಿನಲ್ಲಿ ಚಾಕು ಇರಿದಿದ್ದಾರೆ.
ಇಬ್ಬರು ಆರೋಪಿಗಳ ಪೈಕಿ ಓರ್ವ ಆಟೋ ಚಾಲಕ ಹಾಗೂ ಮತ್ತೋರ್ವ ಚಿಕನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದವನು ಎಂದು ತಿಳಿದು ಬಂದಿದೆ. ಓರ್ವನನ್ನು ಮಾಲೂರು ಠಾಣೆಯ ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಆರೋಪಿ ಎಸ್ಕೇಪ್ ಆಗಿದ್ದಾನೆ. ಇನ್ನು ರವಿ ಕುಮಾರ್ ಕಿವಿ, ಮುಖ ಹಾಗೂ ಎದೆಯ ಮೇಲೆ ಗಾಯಗಳಾಗಿವೆ. ಅವರನ್ನು ಮಾಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆ ಖಂಡಿಸಿ ಆರ್‌ಎಸ್‌ಎಸ್ ಮುಖಂಡರು ಹಾಗೂ ಬಿಜೆಪಿ ನಾಯಕರು ಪೊಲೀಸ್ ಠಾಣೆಯ ಮುಂಭಾಗದಲ್ಲಿ ಪ್ರತಿಭಟನೆ ನಡಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಎಸ್‌ಪಿ ದೇವರಾಜ್ ಸೂಕ್ತ ಕ್ರಮ ಕೊಳ್ಳುವುದಾಗಿ ತಿಳಿಸಿದರು.
PublicNext
06/08/2022 09:33 pm