ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಬೆಳ್ಳಂ ಬೆಳಿಗ್ಗೆ ಆಂಜನೇಯ ಮೂರ್ತಿ ಕಳ್ಳತನ

ಗದಗ: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ಶ್ರೀ ಮರಡಿ ಮಾರುತೇಶ್ವರ ದೇವಸ್ಥಾನದ ಆಂಜನೇಯ ಸ್ವಾಮಿಯ ಮೂರ್ತಿಯನ್ನು ಶನಿವಾರ ಬೆಳಿಗ್ಗೆ ಕಳ್ಳರು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ಸುಮಾರು ವರ್ಷಗಳಿಂದ ಆಂಜನೇಯ ಸ್ವಾಮೀಯ ದೇವಸ್ಥಾನ ಇದ್ದು ಇಲ್ಲಿಯ ಮೂರ್ತಿಯನ್ನು ಕಳ್ಳರು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ.

ಸೂರಣಗಿ ಗ್ರಾಮದ ಆಂಜನೇಯ ಸ್ವಾಮಿಯ ಮೂರ್ತಿಯನ್ನು ಸಂಜೆ ಒಳಗೆ ಗುಡಿಯೊಳಗೆ ತಂದು ಇಡದಿದ್ದಲ್ಲಿ ಕಮೀಟಿಯ ವತಿಯಿಂದ ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ನಿರ್ಧರಿಸಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Edited By :
PublicNext

PublicNext

06/08/2022 11:27 am

Cinque Terre

42.82 K

Cinque Terre

1

ಸಂಬಂಧಿತ ಸುದ್ದಿ