ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕರಾವಳಿಯಲ್ಲಿ ಮತ್ತೆ ಲವ್ ಜಿಹಾದ್ ಸುದ್ದಿ: ಮದ್ವೆ ತಡೆಯಲು ಯತ್ನ- ಕೇಸ್‌ಗೆ ಅಂತ್ಯ ಹಾಡಿದ ಯುವತಿ

ಮಂಗಳೂರು: ಕರಾವಳಿಯಲ್ಲಿ ಮತ್ತೆ ಲವ್ ಜಿಹಾದ್ ಸುದ್ದಿಯೊಂದು ಬಿಸಿಬಿಸಿ ಚರ್ಚೆ ಹುಟ್ಟು ಹಾಕಿದೆ. ಅನ್ಯಧರ್ಮದ ಮೆಡಿಕಲ್ ಜೋಡಿಯ ವಿವಾಹಕ್ಕೆ ಲವ್ ಜಿಹಾದ್ ಆರೋಪ ಕೇಳಿ ಬಂದಿದ್ದು, ಜೋಡಿಯ ಮದುವೆ ಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮದುವೆ ತಡೆಯಲು ಹಿಂದೂ ಸಂಘಟನೆಗಳು ಮತ್ತು ವಜ್ರದೇಹಿ ರಾಜಶೇಖರಾನಂದ ಸ್ವಾಮೀಜಿ ಯತ್ನಿಸಿದ್ದು, ಯುವತಿ ತನ್ನ ನಿರ್ಧಾರ ಬದಲಿಸಲ್ಲ ಎಂದು ಮುಖ ಭಂಗ ಮಾಡಿ ಕಲಿಸಿರುವ ಘಟನೆ ನಡೆದಿದೆ.

ಮಂಗಳೂರಿನ ಖಾಸಗಿ ಮೆಡಿಕಲ್ ಕಾಲೇಜಿನ ಜೋಡಿಗಳು ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಮನೆಯವರನೆಲ್ಲ ಒಪ್ಪಿಸಿ ಶಾಸ್ತ್ರಬದ್ಧವಾಗಿ ಮದುವೆಯಾಗುತ್ತಿದ್ದಾರೆ. ಕೇರಳದ ಕಣ್ಣೂರಿನಲ್ಲೇ ನವೆಂಬರ್ 29ರಂದು ಇಬ್ಬರ ವಿವಾಹಕ್ಕೆ ಡೇಟ್ ಫಿಕ್ಸ್ ಆಗಿದೆ. ಆದ್ರೆ ಹಿಂದೂ ಹುಡುಗಿ-ಮುಸ್ಲಿಂ ಹುಡುಗನ ಮದುವೆ ಕಾರ್ಡ್ ಸದ್ಯ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಈ ವಿವಾಹಕ್ಕೆ ಲವ್ ಜಿಹಾದ್ ಎಂಬ ಹಣೆ ಪಟ್ಟಿ ಅಂಟಿಸಿ ಹಿಂದೂ ಸಂಘಟನೆ ಮತ್ತು ಹಿಂದೂ ಟಾಸ್ಕ್ ಫೋರ್ಸ್ ಸಮಿತಿಯ ಮುಖ್ಯಸ್ಥ ವಜ್ರದೇಹಿ ರಾಜಶೇಖರಾನಂದ ಸ್ವಾಮೀಜಿ ಆಕ್ರೋಶ ಹೊರ ಹಾಕಿದ್ದಾರೆ.

ಮದುವೆ ತಡೆಯಲು ಸ್ವಾಮೀಜಿ ಮಧ್ಯಸ್ಥಿಕೆ ವಹಿಸಿದ್ದು ಬಜರಂಗದಳದ ಪ್ರಮುಖರ ಜೊತೆ ಹಿಂದೂ ಯುವತಿ ಮನೆಗೆ ತೆರಳಿ ವಜ್ರದೇಹಿ ರಾಜಶೇಖರಾನಂದ ಸ್ವಾಮೀಜಿ ಮನವೊಲಿಕೆ ಯತ್ನಿಸಿದ್ದಾರೆ. ಸದ್ಯ ಮದುವೆ ಮುಂದೂಡಿ ಈ ಬಗ್ಗೆ ಯೋಚಿಸುವಂತೆ ಸಲಹೆ ನೀಡಿದ್ದಾರೆ. ಆದ್ರೆ ಯುವತಿ ಸ್ವಾಮೀಜಿಯ ಮಾತುಗಳನ್ನು ತಳ್ಳಿ ಹಾಕಿದ್ದು ಇದು ಲವ್ ಜಿಹಾದ್ ಅಲ್ಲ. ನಾವಿಬ್ಬರೂ ಪ್ರೀತಿಸಿ ಮದುವೆಯಾಗುತ್ತಿದ್ದೇವೆ. ಮುಸ್ಲಿಂ ಯುವಕನ ಮದುವೆಯಾದರೂ ಹಿಂದೂ ಧರ್ಮದಲ್ಲೇ ಮುಂದುವರೆಯುವೆ ಎಂದು ತಿಳಿಸಿದ್ದಾರೆ. ಸದ್ಯ ಅನ್ಯ ಧರ್ಮೀಯ ವಿವಾಹ ಪ್ರಕರಣ ಕರಾವಳಿಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

Edited By : Vijay Kumar
PublicNext

PublicNext

22/11/2021 01:36 pm

Cinque Terre

29.11 K

Cinque Terre

19

ಸಂಬಂಧಿತ ಸುದ್ದಿ