ಭೂಪಾಲ್:ದುರ್ಗಾ ದೇವಿ ವಿಸರ್ಜನೆ ವೇಳೆ ಭಕ್ತರಿಗೆ ಕಾರೊಂದು ಡಿಕ್ಕಿ ಹೊಡೆದು ಹೋಗಿದೆ. ಈ ಘಟನೆ ನಡೆದಿದ್ದೇ ತಡ. ಇಡೀ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗಳು ಆಗಿವೆ. ಹಾಗೇನೆ ಈಗ ಇನ್ನೂ ಒಂದ್ ವಿಷಯ ತಿಳಿದು ಬಂದಿದೆ. ದುರ್ಗಾ ದೇವಿ ಭಕ್ತರಿಗೆ ಕಾರು ಡಿಕ್ಕಿ ಹೊಡೆದ ಚಾಲಕನ ಹೆಸರು ಮೊಹಮ್ಮದ್ ಉಮರ್. ಈ ಉಮರ್ ಈಗ ಅರೆಸ್ಟ್ ಆಗಿದ್ದಾನೆ. ಆದರೆ ಇವನ ಜೊತೆಗಿದ್ದ ನದೀಮ್ ತಲೆಮರೆಸಿಕೊಂಡಿದ್ದಾನೆ.
ಮೊನ್ನೆ ಇಲ್ಲಿ ದುರ್ಗಾ ದೇವಿ ವಿಸರ್ಜನೆ ಕಾರ್ಯಕ್ರಮ ಇತ್ತು. ದೇವಿ ಭಕ್ತರು ದೇವಿ ವಿಸರ್ಜನೆಯಲ್ಲಿಯೇ ತಲ್ಲೀನರಾಗಿದ್ದರು. ಆಗಲೇ ಕಾರೊಂದು ಬಂದು ಭಕ್ತರಿಗೆ ಡಿಕ್ಕಿ ಹೊಡೆದು ಹೋಯಿತು. ಭಕ್ತರು ಆಗ ವಿಚಲಿತಗೊಂಡಿದ್ದರು. ಈ ವಿಷಯ ಈಗ ಗಂಭೀರ ಸ್ವರೂಪ ತಾಳಿದೆ.ಸೋಷಿಯಲ್ ಮೀಡಿಯಾದಲ್ಲಿ ಈ ಘಟನೆಯ ವೀಡಿಯೋ ಶೇರ್ ಆಗುತ್ತಿದೆ. ಕಾಮೆಂಟ್ ಕೂಡ ಗಂಭೀರವಾಗಿಯೇ ಬರುತ್ತಿವೆ. ಎನ್ಐಟಿಯ ರಿಸರ್ಚರ್, ಗೋಪಾಲ್ ಸ್ವಾಮಿ ಅಂತು, ಇದೇ ಮುಸ್ಲಿಂ ಮೇಲೆ ಆಗಿದ್ದರೇ ಭಾರಿ ಚರ್ಚೆಗೆ ಗ್ರಾಸವಾಗುತ್ತಿತ್ತು ಅಂತಲೇ ಆರೋಪ ಮಾಡಿದ್ದಾರೆ.
PublicNext
18/10/2021 06:44 pm