ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಒಂದೇ ರಾತ್ರಿಯಲ್ಲಿ 5 ಬೈಕ್ ಗಳಿಗೆ ಕನ್ನ; ಬೆಚ್ಚಿಬಿದ್ದ ಅವಳಿ ನಗರದ ಜನ

ಕಾಂಪೌಂಡ್ ಒಳಗೆ ಹಾಗೂ ಮನೆ ಮುಂದೆ ನಿಲ್ಲಿಸಿದ್ದ ಸುಮಾರು 5 ಬೈಕ್ ಗಳನ್ನ ಒಂದೇ ರಾತ್ರಿಯಲ್ಲಿ ಕಳ್ಳತನ ಮಾಡಿದ ಘಟನೆ ಗದಗ ನಗರದಲ್ಲಿ ನಡೆದಿದೆ.

ನಗರದ ಜಿಲ್ಲಾ ಕ್ರೀಡಾಂಗಣ ಬಳಿ, ನಂದೀಶ್ವರ ಮಠ ಹಾಗೂ ಕೆಸಿ ರಾಣಿ ರಸ್ತೆಯಲ್ಲಿನ ಮನೆಗಳ ಬಳಿ ನಿಲ್ಲಿಸಿದ್ದ ಬೈಕ್ ಗಳು ಕಳ್ಳತನವಾಗಿವೆ.

ಸದ್ಯ ಕಳ್ಳರ ಕರಾಮತ್ತು ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನು ಕ್ಯಾಮೆರಾದಲ್ಲಿ ಗಮನಿಸುವಂತೆ ಬೈಕ್ ಖದೀಮರು ಯಾರ ಭಯವಿಲ್ಲದೆ ಕಾಂಪೌಂಡ್ ಒಳಗೆ ನುಗ್ಗಿ ತಡಕಾಡಿದ್ದಾರೆ. ಅಷ್ಟೇ ಅಲ್ಲದೆ ಕ್ಯಾಮೆರಾವನ್ನು ಲೆಕ್ಕಿಸದೆ ಬೈಕ್ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾರೆ.

ಕಳೆದ ಕೆಲ ತಿಂಗಳಿನಿಂದ ಒಂದಲ್ಲಾ ಒಂದು ಕಳ್ಳತನ ಆಗ್ತಿದ್ದು, ಕಳ್ಳರ ಹಾವಳಿಗೆ ಗದಗ ಬೆಟಗೇರಿ ಅವಳಿ ನಗರದ ಜನ್ರು ಬೆಚ್ಚಿ ಬಿದ್ದಿದ್ದಾರೆ. ಇಂದಿನ ಐದು ಬೈಕ್ ಕಳ್ಳತನ ಬಗ್ಗೆ ಗದಗನ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಜಾಲ ಬೆನ್ನು ಹತ್ತಿದ್ದಾರೆ.

Edited By :
PublicNext

PublicNext

23/08/2022 04:35 pm

Cinque Terre

89.8 K

Cinque Terre

0