ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಭೀಷ್ಮ ಕೆರೆಯಲ್ಲಿ ಯುವಕನ ಶವ ಪತ್ತೆ; ಭದ್ರತಾ ವೈಫಲ್ಯವೇ ಸಾವುಗಳಿಗೆ ಕಾರಣವಾಯಿತಾ?

ಮುದ್ರಣ ಕಾಶಿ ಗದಗನ ಹೃದಯ ಭಾಗದಲ್ಲಿರುವ ಭೀಷ್ಮ ಕೆರೆಯಲ್ಲಿ ಯುವಕನ ಶವವೊಂದು ಪತ್ತೆಯಾಗಿದೆ. ಶಿವಪ್ಪ ಈಟಿ (35) ಎಂಬ ಯುವಕನ ಶವ ಪತ್ತೆಯಾಗಿದ್ದು, ಈತ ಬೆಳಗಾವಿ ಜಿಲ್ಲೆ ರಾಮದುರ್ಗ ಮೂಲದ ನಿವಾಸಿ ಎಂದು ತಿಳಿದು ಬಂದಿದೆ.

ಕೌಟುಂಬಿಕ ಕಲಹದಿಂದ ಯುವಕ ಆತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದೆ. ಮೃತ ಯುವಕ ಶಿವಪ್ಪ ೩ ದಿನಗಳ ಹಿಂದೆಯೇ ಮನೆಯಿಂದ ಕಾಣೆಯಾಗಿದ್ದನೆಂದು ತಿಳಿದು ಬಂದಿದ್ದು, ಇಂದು ಗದಗ ಭೀಷ್ಮ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಗದಗ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ. ಇನ್ನು ನಗರದ ಹೃದಯ ಭಾಗದಲ್ಲಿರುವ ಐತಿಹಾಸಿಕ ಭೀಷ್ಮ ಕೆರೆ ಇದಾಗಿದ್ದು, ಐತಿಹಾಸಿಕ ಕೆರೆ ಸುತ್ತ ಭದ್ರತೆ ಇಲ್ಲದಕ್ಕೇನೆ ಸಾಕಷ್ಟು ಸಾವುಗಳು ಸಂಭವಿಸುತ್ತಿವೆ ಎನ್ನಲಾಗಿದೆ.

ಸಿ.ಸಿ ಕ್ಯಾಮೆರಾ ಸೇರಿದಂತೆ ಭದ್ರತಾ ಸಿಬ್ಬಂದಿ ಕೊರತೆಯೇ ಇಂಥಹ ಸಾವುಗಳಿಗೆ ಕಾರಣ ಎನ್ನಲಾಗಿದ್ದು, ನಗರಸಭೆ ಹಾಗೂ ಜಿಲ್ಲಾಡಳಿತ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

Edited By :
PublicNext

PublicNext

12/08/2022 03:08 pm

Cinque Terre

38.83 K

Cinque Terre

0

ಸಂಬಂಧಿತ ಸುದ್ದಿ