ಬೆಂಗಳೂರು : ಸ್ಯಾಂಡಲ್ವುಡ್ ಡ್ರಗ್ಸ್ ಜಾಲದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಹತ್ವದ ವಿಶೇಷ ಬಹಿರಂಗ ಪಡಿಸಿರುವ ಪ್ರಶಾಂತ್ ಸಂಬರಗಿ ಮತ್ತೊಂದು ಸ್ಪೋಟಕ ಸುದ್ದಿ ನೀಡಿದ್ದಾರೆ.
ಹೌದು ! ಪ್ರಶಾಂತ್ ಸಂಬರಗಿ ತಮ್ಮ ಟ್ವಿಟರ್ ಖಾತೆಯಲ್ಲಿ ಮತ್ತೊಂದು ಪೋಸ್ಟ್ ಹಾಕಿ
ಚಿತ್ರರಂಗದ ಇಬ್ಬರು 'ಎ' ಗ್ರೇಡ್ ನಟರು ಸಹ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದಾರೆ. ಇಬ್ಬರು ದೊಡ್ಡನಟರ ಸಮೇತ ಮತ್ತಷ್ಟು ಜನರ ವಿವರ ಬಹಿರಂಗ ಪಡಿಸುತ್ತೇನೆ ಎಂದು ಪ್ರಶಾಂತ್ ಸಂಬರಗಿ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಟ್ವಿಟ್ ಮತ್ತೇ ಚಂದನವನದಲ್ಲಿ ನಡುಕ ಹುಟ್ಟಿಸಿದ್ದು ಮತ್ತೆ ಯಾರು ಡ್ರಗ್ಸ್ ಜಾಲಕ್ಕೆ ಸಿಲುಕುತ್ತಾರೋ ಕಾದು ನೋಡಬೇಕಿದೆ.
PublicNext
19/09/2020 12:48 pm