ಮಡಿಕೇರಿ ನಗರದಲ್ಲಿ ಮೊಬೈಲ್ ಅಂಗಡಿ ಹಾಗೂ ಕರೆನ್ಸಿ ಅಂಗಡಿಯೊಂದನ್ನು ಇಟ್ಟುಕೊಂಡಿದ್ದ ಮುದಾಸಿರ್ ಎಂಬ ಮುಸ್ಲಿಂ ಯುವಕ ಮಹಿಳೆಯರ ನಂಬರ ಪಡೆದು ಅವರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ವಿಕೃತಿ ಮೆರೆಯುತ್ತಿದ್ದ.
ಇದರಿಂದ ಬೇಸತ್ತ ವಿವಾಹಿತೆಯೊರ್ವಳು ಈ ಕಾಮುಕನ ಮೈಚಳಿ ಬಿಡಿಸಿದ್ದಾರೆ.
ಹೌದು ಕಾಮುಕನನ್ನು ಖೆಡ್ಡಾಕ್ಕೆ ಬೀಳಿಸಲು ಪ್ಲಾನ್ ಮಾಡಿದ್ದ ಮಹಿಳೆ, ಸಾಮಾಜಿಕ ಕಾಳಜಿ ಉಳ್ಳ ಕೊಡಗು ರಕ್ಷಣಾ ವೇದಿಕೆ ಗೆ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ರಕ್ಷಣಾ ವೇದಿಕೆಯವರು ಆತನಿಗೆ ಕರೆ ಮಾಡಿ ಬರುವಂತೆ ತಿಳಿಸಲು ಮಹಿಳೆಗೆ ಹೇಳಿದ್ದರು.
ರಕ್ಷಣಾ ವೇದಿಕೆ ಸಲಹೆಯಂತೆ ಮಹಿಳೆ ಆರೋಪಿಯನ್ನು ಹಳೆ ಆರ್ ಟಿಓ ಕಚೇರಿ ಬಳಿ ಬಾ ಮಾತನಾಡೋಣ ಎಂದು ಸಂದೇಶ ಕಳುಹಿಸಿದ್ದರು.
ಇಲ್ಲಿ ಮೊದಲೇ ಸಜ್ಜಾಗಿ ನಿಂತಿದ್ದ ಮಹಿಳೆಯ ಸಂಬಂಧಿಗಳು ಹಾಗೂ ಕೊಡಗು ರಕ್ಷಣಾ ವೇದಿಕೆ ಕಾರ್ಯಕರ್ತರು ಕಾಮುಕ ಯುವಕನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಮಹಿಳೆಯೂ ಕಾಮುಕನಿಗೆ ಗೂಸಾ ನೀಡಿ ಚಪ್ಪಲಿ ಸೇವೆ ಮಾಡಿರುವ ವಿಡಿಯೋ ವೈರಲ್ ಆಗಿದೆ.
PublicNext
18/09/2020 10:50 pm