ತಿರುವನಂತಪುರಂ : ಮನುಷ್ಯನಿಗೆ ತನಗಾದ ಹಾನಿಗೆ ಸೇಡು ತೀರಿಸಿಕೊಳ್ಳುವ ಕಿಚ್ಚು ಎಷ್ಟಿರುತ್ತದೆ ಎಂಬುದಕ್ಕೆ ಇಲ್ಲೊಂದು ಘಟನೆ ನಿದರ್ಶನವಾಗಿದೆ.
ಹೌದು ! ವ್ಯಕ್ತಿಯೊಬ್ಬ ತನ್ನ ಹಸುವನ್ನು ಕೊಂದಿದ್ದಕ್ಕೆ ಒಂದೂವರೆ ವರ್ಷದಿಂದ ಕಾದು ಚಿರತೆಯನ್ನು ಹತ್ಯೆಗೈದಿರುವ ಘಟನೆ ಕೇರಳದ ಮುನ್ನಾರ್ನಲ್ಲಿ ನಡೆದಿದೆ.
ಚಿರತೆಯನ್ನು ಕೊಂದ 34 ವರ್ಷದ ಕುಮಾರ ನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು ಚಿರತೆ ಆರೋಪಿಯ ಹಸುವನ್ನು ಒಂದು ವರ್ಷದ ಹಿಂದೆ ಕೊಂದ ನಂತರ ಚಿರತೆಗಾಗಿ ಬಲೆ ಹಾಕಿದ್ದ ಎಂಬ ವಿಷಯ ಗೊತ್ತಾಗಿದೆ.
ಕಳೆದ ಸೆಪ್ಟೆಂಬರ್ 8 ದಿನ ಕನ್ನಿಮಲಾ ಎಸ್ಟೇಟ್ ಕೆಳ ವಿಭಾಗದಲ್ಲಿ ನಾಲ್ಕು ವರ್ಷದ ಚಿರತೆ ಬಲೆಗೆ ಬಿದ್ದು ಶವವಾಗಿ ದೊರೆತಿತ್ತು ಬಳಿಕ ಅರಣ್ಯ ಇಲಾಖೆ ಚಿರತೆಯ ಸಾವಿನ ಬಗ್ಗೆ ತನಿಖೆ ಕೈಗೊಂಡಾಗ ತನಿಖೆ ವೇಳೆ ಕುಮಾರ್ ಚಿರತೆಯನ್ನು ಕೊಂದಿರುವುದು ಪತ್ತೆಯಾಗಿದ್ದು, ಆತನನ್ನು ಬಂಧನದಲ್ಲಿರಿಸಿ ನ್ಯಾಯಲಯಕ್ಕೆ ಹಾಜರು ಪಡಿಸಲಾಗುತ್ತಿದೆ.
PublicNext
19/09/2020 10:54 am