ಜಿಲ್ಲೆಯ ಶಹಾಪುರ ತಾಲ್ಲೂಕಿನ ಗೋಗಿ ಪೊಲೀಸ್ ಠಾಣಾ ವ್ಯಾಪ್ತಿಯ ಚಾಮನಾಳ ಗ್ರಾಮದ ಹೊರ ವಲಯದಲ್ಲಿ ಮೇ 30ರಂದು ಸಚಿನ್ ಎಂಬ ವ್ಯಕ್ತಿಯ ಕುತ್ತಿಗೆಗೆ ಸೀರೆ ಕಟ್ಟಿ ಕೊಲೆಗೈದಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ಸುರಪುರ ತಾಲ್ಲೂಕಿನ ದಂಡಸೋಲಾಪೂರ ಗ್ರಾಮದ ಸಚಿನ್ ವರ್ಕುಂದ ಗ್ಯಾರೇಜ್ ನಲ್ಲಿ ಕೆಲಸ ಮಾಡ್ತಿದ್ದು,ಈತನನ್ನ ಶಹಾಪುರ ತಾಲ್ಲೂಕಿನ ಚಾಮನಾಳ ಗ್ರಾಮದ ಚಂದ್ರು ಹಾಗೂ ದಂಡಸೊಲ್ಲಾಪುರಿನ ಹಳ್ಳೆಪ್ಪ ಇವರಿಬ್ಬರು ಸೇರಿ ಕೊಲೆ ಮಾಡಿದ್ದಾರೆ.
ಚಾಮನಾಳ ಗ್ರಾಮದ ಸೀತಾರಾಮ ರಾಥೋಡ ಹೊಲದಲ್ಲಿ ಆರೋಪಿ ಚಂದ್ರು ಬದನೆಕಾಯಿ ಕಳವು ಮಾಡಿಕೊಂಡು ಹೋಗಿದ್ದು, ಈ ವಿಷಯ ಸಚಿನ್ ಮಾಲೀಕರಿಗೆ ತಿಳಿಸಿದ್ದು, ಮಾಲೀಕ ಸೀತಾರಾಮ ಚಂದ್ರು ಜೊತೆ ಜಗಳವಾಡಿದ್ದ. ಇದೆ ಸಿಟ್ಟಿಗೆ ಕುಡಿದ ಅಮಲಿನಲ್ಲಿ ಮೂವರ ನಡುವೆ ಮಾತು ಬೆಳೆದಿದ್ದು, ಸಚಿನ್ ಅವಾಚ್ಯವಾಗಿ ಬೈದಿದ್ದಕ್ಕೆ ಕೊಲೆ ಮಾಡಿದ್ದೇವೆ ಎಂದು ಆರೋಪಿಗಳಿಬ್ಬರು ಬಾಯ್ಬಿಟ್ಟಿದ್ದಾರೆ.
ಆರೋಪಿಗಳನ್ನು ಅರೆಸ್ಟ್ ಮಾಡಿದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಬದನೆಕಾಯಿ ಕಳವು ವಿಚಾರಕ್ಕೆ ಎಣ್ಣೆ ಏಟಲ್ಲಿ ಕೊಲೆ ಮಾಡಿದ್ದು ಮಾತ್ರ ಜಿಲ್ಲೆಯ ಜನರನ್ನ ಬೆಚ್ಚಿ ಬೀಳಿಸಿದೆ.
ವರದಿ: ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ
PublicNext
01/06/2022 06:05 pm