ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಮನಗರ : ಗೋ ರಕ್ಷಣೆಗೆ ಬಂದವರ ಮೇಲೆ ಪೊಲೀಸರ ಎದುರೇ ಹಲ್ಲೆ

ರಾಜ್ಯದಲ್ಲಿ ಜಾರಿಯಲ್ಲಿರುವ ಗೋ ಹತ್ಯೆ ನಿಷೇಧ ಕಾಯ್ದೆ ನೆಪ ಮಾತ್ರಕ್ಕೆ ಸೀಮಿತವಾ ? ಎಂಬ ಪ್ರಶ್ನೆ ಎದುರಾಗಿದ್ದು, ಗೋ ರಕ್ಷಣೆ ಮಾಡಲು ಹೋದವರಿಗೆ ಪೊಲೀಸರ ಎದುರೇ ಹಲ್ಲೆ ನಡೆಸಲಾಗಿದೆ.

ಹೌದು ! ಗೋಹತ್ಯೆ ನಿಷೇಧ ಕಾಯ್ದೆಯನ್ನು ಗಾಳಿಗೆ ತೂರಿ ಎಗ್ಗಿಲ್ಲದೆ ನಡೆಯುತ್ತಿದ್ದ ಗೋ ಮಾಂಸ ಮಾರಾಟ ಹಾಗೂ ಅಕ್ರಮ ಕಾಸಾಯಿಖಾನೆ ಬಗ್ಗೆ ಪ್ರಶ್ನೆ ? ಮಾಡಿದ ಗೌ ಗ್ಯಾನ್ ಫೌಂಡೇಷನ್‌ ಇಬ್ಬರು ಕಾರ್ಯಕರ್ತರನ್ನು ಪೋಲಿಸರ ಎದುರು ಮನಬಂದಂತೆ ಥಳಿಸಿರುವ ಘಟನೆ ಚನ್ನಪಟ್ಟಣದಲ್ಲಿ ನಡೆದಿದೆ.

ನಗರದ ಇಂದಿರಾ ಕಾಟೇಜ್ ಬಡವಾಣೆಯ ಅಕ್ರಮ ಕಾಸಾಯಿಖಾನೆ ಮೇಲೆ ಗೌ ಗ್ಯಾನ್ ಫೌಂಡೇಷನ್‌ 5-6 ಮಂದಿ ಸದಸ್ಯರು ಹಾಗೂ ನಗರ ಠಾಣೆ ಪೊಲೀಸರು ಜಂಟಿಯಾಗಿ ದಾಳಿ ಮಾಡಿದ್ದರು.

ಈ ಸಮಯದಲ್ಲಿ ಗುಂಪು ಸೇರಿದ ಕೆಲ ಪುಂಡರು ಗೌ ಗ್ಯಾನ್ ಫೌಂಡೇಶನ್ ‌ಸದಸ್ಯರಾದ ಅರುಣ್ ಮತ್ತು ಶ್ಯಾಮ್ ಇಬ್ಬರ ಹಲ್ಲೆ ಮಾಡಿದ್ದಾರೆ.

ಹಲ್ಲೆಗೆ ಒಳಗಾದವರನ್ನು ಸ್ಥಳದಲ್ಲಿದ್ದ ಪೋಲಿಸರು ರಕ್ಷಣೆ ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಆರೋಪಿಗಳಾದ ಅಸ್ಗರ್ ಪಾಷ, ಅಕ್ರಂ ಪಾಷ,ನಿಹಾಲ್ ಮೆಹದಿ ಮತ್ತು ಸಾಧಿಕ್ ನನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿಸಿದ್ದಾರೆ.

ಪಟ್ಟಣದ ಎರಡು ಕಡೆ ಅಕ್ರಮ ಕಾಸಾಯಿಖಾನೆ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಐದು ಜೀವಂತ ಹಸುಗಳು, ಒಂದು ಅಶೋಕ್ ಲೈಲ್ಯಾಂಡ್ ವಾಹನ ಮೂರು ಸಾವಿರ ಗೋವಿನ ಚರ್ಮ ಹಾಗೂ ನಾಲ್ಕು ಸಾವಿರ ಕಿಲೋ ಗೋ ಮಾಂಸ ವಶಪಡಿಸಿಕೊಳ್ಳಲಾಗಿದೆ. ಇನ್ನೂ ಗೋ ಮಾಂಸ ಪರೀಕ್ಷೆಗೆಂದು ಬಂದ ಪಶುವೈದ್ಯಾಧಿಕಾರಿ ಡಾ.ಗಿರೀಶ್ ಮೇಲೆ ಹಲ್ಲೆ ಮಾಡಿದ್ದು ಪೊಲೀಸರ ಸಮ್ಮುಖದಲ್ಲೆ ಹಲ್ಲೆ ಮಾಡುತ್ತಿದ್ದರೂ ಪೊಲೀಸರು ಮಾತ್ರ ಮೂಖ ಪ್ರೇಕ್ಚಕರಾಗಿದ್ದು ವಿಪರ್ಯಾಸ ಸಂಗತಿ.

ಒಟ್ಟಾರೆ ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ರೂ ಈ ಕಾಯ್ದೆ ಮಾತ್ರ ಚನ್ನಪಟ್ಟಣದಲ್ಲಿ ಅನ್ವಯವಾದಂತ್ತಿಲ್ಲಾ. ಗೋ ರಕ್ಷಣೆ ಮಾಡಲು ಹೋದಂತವರಿಗೆ ಪೊಲೀಸರ ಮುಂದೆಯೆ ಹಲ್ಲೆ ನಡೆದಿದ್ದು ಮಾತ್ರ ಖಂಡನೀಯ.

Edited By :
PublicNext

PublicNext

18/05/2022 05:34 pm

Cinque Terre

85.37 K

Cinque Terre

76