ಈ ಪುಟ್ಟ ಹುಡುಗನ ಆಂತರಿಕ ಅಂಗಾಗಗಳು ಊದಿಕೊಂಡಿದ್ದವು. ವೈದ್ಯರು ಇದಕ್ಕೆ ಏನೂ ಕಾರಣ ಅಂತಲೂ ಹೇಳಿದ್ದರು. ಬಲವಾಗಿ ಹೊಡೆದಿದ್ದರಿಂದಲೇ ಮಗುವಿಗೆ ಹೀಗೆ ಆಗಿದೆ ಅಂತಲೇ ಹೇಳಿದ್ದರು. ಆಗಲೇ ನೋಡಿ 2 ವರ್ಷದ ಈ ಮಗುವಿನ ತಂದೆ ಮನೆಯಲ್ಲಿ ಸಿಸಿಟಿ ಅಳವಡಿಸಿದ್ದರು. ಆಗ ತಿಳಿದ ಸತ್ಯವೇ ಬೇರೆ.
ಈ ಪುಟ್ಟ ಹುಡುಗನ ಪೋಷಕರು ಮಗುವನ್ನ ಮನೆಯಲ್ಲಿಯೇ ಬಿಟ್ಟು ಇಬ್ಬರೂ ಕೆಲಸಕ್ಕೆ ಹೋಗ್ತಾರೆ. ಮಗುವನ್ನ ನೋಡಿಕೊಳ್ಳಲು ಪ್ರತಿ ತಿಂಗಳು 5000 ಸಂಭಾವನೆ ಕೊಟ್ಟು ರಜನಿ ಚೌಧರಿ ಅನ್ನೋ ಕೆಲಸದಾಕೆಯನ್ನ ನೇಮಿಸಿಕೊಂಡಿದ್ದರು.
ಆದರೆ, ಈಕೆ ಪೋಷಕರು ಕೆಲಸಕ್ಕೆ ಹೋದ್ಮೇಲೆ ಮಗುವನ್ನ ಹೊಡೆಯುತ್ತಿದ್ದಳು. ಕೈಯಿಂದಲೂ ಗುದ್ದುತ್ತಿದ್ದಳು. ಈ ಅನುಮಾನದ ಮೇಲೆ ಮನೆಯಲ್ಲಿ ಅಳವಡಿಸಿದ ಸಿಸಿಟಿವಿಯಲ್ಲಿ ಕೆಲಸದಾಕೆಯ ಕೃತ್ಯ ಸೆರೆ ಆಗಿದೆ. ಜಬಲ್ಪುರದ ಪೊಲೀಸರು ಈ ಮಹಿಳೆಯನ್ನ ಈಗ ಅರೆಸ್ಟ್ ಮಾಡಿದ್ದಾರೆ.
PublicNext
15/06/2022 03:20 pm