ಹೊಸದಿಲ್ಲಿ: ಗಡಿಯಲ್ಲಿ ಕಿರಿಕಿರಿ ಮಾಡುತ್ತಿರುವ ಚೀನಾ ಮತ್ತೊಂದು ಕೃತ್ಯಕ್ಕೆ ಕೈಹಾಕಿರುವ ಬಗ್ಗೆ ಅಮೆರಿಕ ವರದಿವೊಂದನ್ನಾ ಪ್ರಕಟಿಸಿದೆ.
ಆ ಆತಂಕಕಾರಿ ವರದಿಯಲ್ಲಿ ಭಾರತದ ಭೂಮಿ ಮೇಲೆ ಮಾತ್ರವಲ್ಲದೆ ದೇಶದ ಉಪ್ರಗ್ರಹಗಳ ಮೇಲೂ ಚೀನಾ ಕೆಂಗಣ್ಣು ಬಿದ್ದಿದೆ ಎಂದು ತಿಳಿಸಿದೆ.
ಹೌದು, 2007 ರಿಂದ, ಚೀನಾ ಭಾರತೀಯ ಉಪಗ್ರಹಗಳ ಸಂವಹನದ ಮೇಲೆ ಹಲವಾರು ಬಾರಿ ಸೈಬರ್ ದಾಳಿ ನಡೆಸಿದೆ ಎಂದು ಅಮೆರಿಕ ಮೂಲದ ಚೀನಾ ಏರೋಸ್ಪೇಸ್ ಸ್ಟಡೀಸ್ ಇನ್ಸ್ಟಿಟ್ಯೂಟ್ (ಸಿಎಎಸ್ ಐ) ಹೊಸ ವರದಿಯಲ್ಲಿ ತಿಳಿಸಿದೆ.
ಇನ್ನುಈ ವರದಿಯಲ್ಲಿ ಪುರಾವೆ ಕೂಡ ಸಿಕ್ಕಿದ್ದು, 2017 ರಲ್ಲಿ ಭಾರತೀಯ ಉಪಗ್ರಹ ಸಂವಹನಗಳ ಮೇಲೆ ಕಂಪ್ಯೂಟರ್ ನೆಟ್ ವರ್ಕ್ ದಾಳಿ ನಡೆದಿರುವುದು ಚೀನಾದಿಂದಲೇ ಎಂದು ವರದಿಯಲ್ಲಿ ತಿಳಿಸಲಾಗಿದೆ.
2012 ಮತ್ತು 2018 ರ ನಡುವೆ ಚೀನಾ ಅನೇಕ ಬಾರಿ ಸೈಬರ್ ದಾಳಿಗಳನ್ನು ನಡೆಸಿದೆ ಎಂದು ತಿಳಿಸಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಸೈಬರ್ ದಾಳಿಯ ಅಪಾಯ ನಿರಂತರವಾಗಿದೆ ಎಂದು ತಿಳಿಸಿದೆ.
ಆದರೆ ತಮ್ಮಲ್ಲಿರುವ ಅತ್ಯಾಧುನಿಕ ವ್ಯವಸ್ಥೆಗಳನ್ನು ಚೀನಾದ ಸೈಬರ್ ದಾಳಿಗೆ ಇನ್ನೂ ಪ್ರವೇಶಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದೆ.
PublicNext
23/09/2020 01:46 pm