ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮರ್ಯಾದಾ ಹತ್ಯೆ: 4 ವರ್ಷ ಲಿವಿಂಗ್ ರಿಲೇಷನ್​ಶಿಪ್- ಕಿಡ್ನಾಪ್‌ ಮಾಡಿ ಮದ್ವೆಯಾಗಿದ್ದ ಯುವಕನ ಹತ್ಯೆ!

ಹೈದರಾಬಾದ್​: ನಗರದಲ್ಲಿ ಮತ್ತೊಂದು ಮರ್ಯಾದಾ ಹತ್ಯೆ ನಡೆದಿದ್ದು, ನವವಿವಾಹಿತನೊಬ್ಬ ಪತ್ನಿಯ ಮನೆಯವರಿಂದಲೇ ಬರ್ಬರವಾಗಿ ಹತ್ಯೆಗೀಡಾಗಿರುವ ಘಟನೆ ತೆಲಂಗಾಣದ ಹೈದರಾಬಾದ್‌ನಲ್ಲಿ ಶುಕ್ರವಾರ ನಡೆದಿದೆ.

ಇಂಟಿರಿಯರ್​ ಡಿಸೈನರ್​ ಆಗಿದ್ದ ಹೇಮಂತ್​ ಕುಮಾರ್​ (28) ಮೃತ ದುರ್ದೈವಿ. ಸಂಗಾರೆಡ್ಡಿ ಜಿಲ್ಲೆಯಲ್ಲಿ ಇಂದು ಹೇಮಂತ್ ಮೃತದೇಹ ಪತ್ತೆಯಾಗಿತ್ತು. ಪ್ರಕರಣದ ಸಂಬಂಧ 13 ಮಂದಿಯನ್ನು ಸೈಬರಬಾದ್​ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಹೇಮಂತ್ ಇಂಜಿನಿಯರ್​ ಪದವೀಧರೆ ಆವಂತಿ ರೆಡ್ಡಿ ಜೊತೆಗೆ ನಾಲ್ಕು ವರ್ಷದಿಂದ ಲಿವಿಂಗ್​ ರಿಲೇಶನ್​ಶಿಪ್​ನಲ್ಲಿದ್ದರು. ಆವಂತಿ ಕುಟುಂಬಸ್ಥರ ವಿರೋಧದ ನಡುವೆ ಗೆಳತಿಯನ್ನ ಕಿಡ್ನಾಪ್ ಮಾಡಿ ಹೇಮಂತ್‌ ಜೂನ್​ ತಿಂಗಳಲ್ಲಿ ರಹಸ್ಯವಾಗಿ ವಿವಾಹವಾಗಿದ್ದ. ನಂತರ ಹೇಮಂತ್ ಮತ್ತು ಅವಂತಿ ನಗರದ ಚಂದನಗರದಲ್ಲಿ ವಾಸವಾಗಿದ್ದರು. ಆದರೆ ಗುರುವಾರ ಮಧ್ಯಾಹ್ನ ಆವಂತಿಯ ಕುಟುಂಬಸ್ಥರು ಬಂದು ಇಬ್ಬರನ್ನೂ ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದರು. ಈ ವೇಳೆ ಆವಂತಿ ತಪ್ಪಿಸಿಕೊಂಡು ಬಂದಿದ್ದರು.

ಹೇಮತ್‌ಗೆ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಆತನನ್ನು ನಿರ್ಜನ ಪ್ರದೇಶದಲ್ಲಿ ಕೊಲೆಗೈದು ಮೃತದೇಹವನ್ನು ಎಸೆದು ಹೋಗಿದ್ದಾರೆ. ಇತ್ತ ಆವಂತಿ ತಕ್ಷಣ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಳು. ಕಾರ್ಯ ಪ್ರವೃತ್ತರಾದ ಪೊಲೀಸರು ಆವಂತಿ ಕುಟುಂಬ ಕೆಲವು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಮೃತದೇಹ ಎಸೆದ ಸ್ಥಳವನ್ನು ಆರೋಪಿಗಳು ಬಾಯಿಬಿಟ್ಟಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Edited By : Vijay Kumar
PublicNext

PublicNext

25/09/2020 04:39 pm

Cinque Terre

44.25 K

Cinque Terre

0

ಸಂಬಂಧಿತ ಸುದ್ದಿ