ಪಾಟ್ನಾ: ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನ ಅಳಿಯನ ಜೊತೆ ಸೇರಿ ಮಹಿಳೆಯೊಬ್ಬಳು ಕೊಲೆಗೈದು ಪಕ್ಕದ ಮನೆಯಲ್ಲಿ ಶವ ನೇತು ಹಾಕಿದ ಅಮಾನವೀಯ ಘಟನೆ ಬಿಹಾರದ ವೈಶಾಲಿ ಜಿಲ್ಲೆಯ ಮುರೌವತಪುರನಲ್ಲಿ ನಡೆದಿದೆ.
ತಿಲಕ್ ರಾಯ್ (50) ಕೊಲೆಯಾದ ವ್ಯಕ್ತಿ. ತಿಲಕ್ ಪತ್ನಿ ಸವಿತಾ ಹಾಗೂ ಅಳಿಯ ಮೋಹನ್ ರಾಯ್ ಕೊಲೆಗೈದ ಆರೋಪಿಗಳು. ಸವಿತಾ ಹಾಗೂ ಮೋಹನ್ ಅಕ್ರಮ ಸಂಬಂಧ ಹೊಂದಿದ್ದರು. ಇದನ್ನು ಅರಿತ ತಿಲಕ್ ಅಳಿಯನಿಂದ ದೂರವಿರುವಂತೆ ಪತ್ನಿಗೆ ಎಚ್ಚರಿಕೆ ನೀಡಿದ್ದ. ಆದರೆ ರಾತ್ರಿ ನಶೆಯಲ್ಲಿ ಪತಿಯನ್ನು ಸವಿತಾ ಮತ್ತು ಮೋಹನ್ ಥಳಿಸಿ ಕೊಲೆಗೈದಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಮೇಲೆ ಅನುಮಾನ ಬರದಿರಲಿ ಎಂದು ಪಕ್ಕದಲ್ಲಿಯ ನಿರ್ಮಾಣ ಹಂತದ ಮನೆಯಲ್ಲಿ ಶವವನ್ನ ನೇತು ಹಾಕಿ ಮನೆ ಸೇರಿದ್ದಾರೆ. ಬೆಳಗ್ಗೆ ಗ್ರಾಮಸ್ಥರು ಶವ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದಾಗ ಅಳಿಯ ಮೋಹನ್ ಜೊತೆ ಅಕ್ರಮ ಸಂಬಂಧ ಹೊಂದಿರುವುದನ್ನ ಅತ್ತೆ ಸವಿತಾ ಒಪ್ಪಿಕೊಂಡಿದ್ದಾಳೆ. ಅತ್ತೆಯ ಮೇಲಿನ ವ್ಯಾಮೋಹದಿಂದ ಸಮಸ್ತಿಪುರದ ನಿವಾಸಿಯಾಗಿದ್ದ ಮೋಹನ್ ರಾಯ್ ಮುರೌವತಪುರನಲ್ಲಿಯೇ ಉಳಿದುಕೊಂಡಿದ್ದನು. ಇಬ್ಬರ ಅಕ್ರಮ ಸಂಬಂಧ ವಿಷಯ ತಿಳಿದ ತಿಲಕ್ ಕುಡಿದು ಬಂದು ಗಲಾಟೆ ಮಾಡುತ್ತಿದ್ದನು. ಆಗ ಆತನನ್ನು ಕೊಲೆ ಮಾಡಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.
PublicNext
03/10/2020 06:19 pm