ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹತ್ರಾಸ್ ಕೇಸ್‌ನಲ್ಲಿ ಭಾರೀ ಪಿತೂರಿ ಶಂಕೆ: ಸೋಷಿಯಲ್ ಮೀಡಿಯಾ ಪೋಸ್ಟ್, ಟಿವಿ ವರದಿಗಳ ವಿರುದ್ಧ 19 ಎಫ್ಐಆರ್

ಲಕ್ನೋ: ದೇಶದಲ್ಲಿ ಸಂಚಲನ ಸೃಷ್ಟಿಸಿರುವ ಹತ್ರಾಸ್ ಪ್ರಕರಣದಲ್ಲಿ ಭಾರೀ ಸಂಚು ಇದೆ ಎಂದು ಶಂಕೆ ವ್ಯಕ್ತಪಡಿಸಿರುವ ಉತ್ತರ ಪ್ರದೇಶ ಪೊಲೀಸರು ರಾಜ್ಯಾದ್ಯಂತ 19 ಪ್ರಕರಣಗಳನ್ನು ದಾಖಲಿಸಿದ್ದಾರೆ.

ಘಟನೆಯನ್ನು ತಿರುಚಲು ಯತ್ನಿಸಿದ ಆರೋಪದ ಮೇಲೆ ಸಾಮಾಜಿಕ ಜಾಲತಾಣ, ಟೆಲಿವಿಷನ್​ ವಾಹಿನಿಗಳಲ್ಲಿನ ವರದಿ ಕುರಿತು ಕೂಡ ಎಫ್​ಐಆರ್​ ದಾಖಲಿಸಿದ್ದಾರೆ. ಕುಟುಂಬದ ಮೇಲೆ ಒತ್ತಡ ಹಾಕಿ ವಿರೋಧದ ಹೇಳಿಕೆ ನೀಡುವಂತೆ ಪ್ರೇರೆಪಿಸಿದವರ ಮೇಲೆ ಕೂಡ ಪ್ರಕರಣ ದಾಖಲಿಸಲಾಗಿದೆ. ರಾಜ್ಯದ ಪ್ರಗತಿಯ ವಿರುದ್ಧ ಹತ್ರಾಸ್ ಪ್ರಕರಣವನ್ನು ಪಿತೂರಿಯಾಗಿ ಬಳಸುತ್ತಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ 24 ಗಂಟೆಗಳಲ್ಲಿ ಪೊಲೀಸರು ಒಟ್ಟು 19 ಪ್ರಕರಣ ದಾಖಲಿಸಿದ್ದಾರೆ.

ದೇಶದ್ರೋಹ, ಪಿತೂರಿ, ಜಾತಿ ವಿಭಜನೆಗೆ ಪ್ರಚೋದನೆ, ಧಾರ್ಮಿಕ ತಾರತಮ್ಯ, ಎಲೆಕ್ಟ್ರಾನಿಕ್ ಸಾಕ್ಷಿಗಳನ್ನು ನಾಶಪಡಿಸುವುದು, ರಾಜ್ಯದ ವಿರುದ್ಧ ಪಿತೂರಿ ಹಾಗೂ ಮಾನಹಾನಿಗೆ ಸಂಬಂಧಿಸಿದಂತೆ ಒಟ್ಟು 19 ಎಫ್‌ಐಆರ್ ಗಳನ್ನು ರಾಜ್ಯಾದ್ಯಂತ ಪೊಲೀಸರು ದಾಖಲಿಸಿದ್ದಾರೆ.

Edited By : Vijay Kumar
PublicNext

PublicNext

05/10/2020 08:15 pm

Cinque Terre

60.21 K

Cinque Terre

5

ಸಂಬಂಧಿತ ಸುದ್ದಿ