ನೋಯ್ಡಾ: ಕಂಠಪೂರ್ತಿ ಕುಡಿದ ಮಹಿಳೆಯೊಬ್ಬಳು ಸೆಕ್ಯುರಿಟಿ ಗಾರ್ಡ್ ಮೇಲೆ ಗೂಂಡಾಗಿರಿ ತೋರಿದ್ದಾಳೆ. ಉತ್ತರ ಪ್ರದೇಶದ ನೋಯ್ಡಾ ನಗರದ ಅಜ್ನಾರಾ ಹೋಮ್ಸ್ ಸೊಸೈಟೊಯಲ್ಲಿ ಈ ಘಟನೆ ನಡೆದಿದೆ.
ಪಾನಮತ್ತಳಾಗಿದ್ದ ಮಹಿಳೆ ಹಾಗೂ ಆಕೆಯೊಂದಿಗೆ ಇದ್ದ ಇತರ ಇಬ್ಬರು ಸಲ್ಲದ ಕಾರಣಕ್ಕೆ ಸೆಕ್ಯುರಿಟಿ ಸಿಬ್ಬಂದಿ ಜೊತೆಗೆ ಕ್ಯಾತೆ ತೆಗೆದಿದ್ದಾರೆ. ಶರ್ಟ್ ಕಾಲರ್ ಹಿಡಿದು ಅನುಚಿತವಾಗಿ ವರ್ತಿಸಿದ್ದೂ ಅಲ್ಲದೇ ಅವಾಚ್ಯವಾಗಿ ಬೈದು ಹಲ್ಲೆ ಮಾಡಿದ್ದಾಳೆ.
ಸ್ಥಳಕ್ಕೆ ಬಂದ ಪೊಲೀಸರು ಮಹಿಳೆಯ ನಶೆ ಇಳಿಸಿದ್ದಾರೆ. ಆಕೆಯೊಂದಿಗೆ ಇದ್ದ ಇನ್ನಿಬ್ಬರನ್ನೂ ಸೇರಿ ಎಲ್ಲರನ್ನೂ ಬಂಧಿಸಿದ್ದಾರೆ. ಹಾಗೂ ಕೇಸ್ ದಾಖಲಿಸಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದಾರೆ.
PublicNext
09/10/2022 03:53 pm