ಶ್ರೀನಗರ: ಭಾರತೀಯ ಸೇನಾಧಿಕಾರಿಗಳ ನೇತೃತ್ವದಲ್ಲಿ ಇಂದು ಜಮ್ಮು-ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಉಗ್ರರ ಅಡಗುತಾಣಗಳ ಮೇಲೆ ಕಾರ್ಯಾಚರಣೆ ನಡೆಸಲಾಗಿದೆ. ಇದಕ್ಕೂ ಮುನ್ನ ಸೇನಾಧಿಕಾರಿಯೊಬ್ಬರು ಉಗ್ರನಿಗೆ ವಿಡಿಯೋ ಕಾಲ್ ಮಾಡಿ 'ಸುಮ್ಮನೆ ಬಂದು ಶರಣಾಗು' ಎಂದು ತಾಕೀತು ಮಾಡಿದ್ದಾರೆ. ಇದಕ್ಕೆ ಉಗ್ರ ನಿರಾಕರಿಸಿದ್ದಾನೆ.
ಇದಾದ ಬಳಿಕ ಭಾರತೀಯ ಸೇನೆಯು ಕಾರ್ಯಾಚರಣೆ ನಡೆಸಿ ಅಡಗು ತಾಣಗಳ ಮೇಲೆ ದಾಳಿ ನಡೆಸಿ ಇಬ್ಬರು ಉಗ್ರರನ್ನು ಗುಂಡಿಕ್ಕಿ ಕೊಂದಿದೆ. ಸ್ಥಳದಲ್ಲಿದ್ದ ಉಗ್ರರ 3 ಎಕೆ ರೈಫಲ್ಸ್ ಹಾಗೂ ಗ್ರೆನೇಡ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಭಾರತೀಯ ಸೇನೆ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತವಾಗಿದೆ.
PublicNext
30/09/2022 08:25 pm