ಬ್ಯಾಂಕ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತನಿಖೆಯಲ್ಲಿ ರಕ್ಷಾ ಬುಲಿಯನ್ ಮತ್ತು ಕ್ಲಾಸಿಕ್ ಮಾರ್ಬಲ್ಸ್ ಆವರಣದಿಂದ 47 ಕೋಟಿ ರೂ. ಮೌಲ್ಯದ ಒಟ್ಟು 431 ಕೆಜಿ ತೂಕದ ಚಿನ್ನ ಮತ್ತು ಬೆಳ್ಳಿಯನ್ನು ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿದೆ.
ಹೌದು ಅಕ್ರಮ ವರ್ಗಾವಣೆ ಕೇಸ್ ತನಿಖೆಯನ್ನು ತೀವ್ರಗೊಳಿಸಿರೋ ಇಡಿ ಅಧಿಕಾರಿಗಳು ಆಸ್ಟ್ರೇಲಿಯಾ ಮೂಲದ ಬುಲಿಯನ್ ಎಂಬ ಕಂಪನಿ ಮೇಲೆ ದಾಳಿ ಮಾಡಿ ಸುಮಾರು 47 ಕೋಟಿ ಮೌಲ್ಯದ 431 ಕೆಜಿ ಚಿನ್ನ ಮತ್ತು ಬೆಳ್ಳಿ ಸೀಜ್ ಮಾಡಿದೆ. ಈ ಕಂಪನಿ ಮೇಲೆ ಕೋಟ್ಯಾಂತರ ರೂಪಾಯಿ ಸಾಲ ವಂಚನೆ ಆರೋಪ ಕೇಳಿ ಬಂದಿತ್ತು.
ಪರೇಖ್ ಅಲ್ಯುಮಿನೆಕ್ಸ್ ಲಿಮಿಟೆಡ್ (Parekh Aluminex Ltd) ಕಂಪನಿ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿ ರಕ್ಷಾ ಬುಲಿಯನ್ ಮತ್ತು ಕ್ಲಾಸಿಕ್ ಮಾರ್ಬಲ್ಸ್ ಮೇಲೆ ಇ.ಡಿ ದಾಳಿ ಮಾಡಿದೆ. ದಾಳಿ ವೇಳೆ ಬುಲಿಯನ್ ಸಂಸ್ಥೆಗೆ ಸೇರಿದ ಕೆಲವು ಸೀಕ್ರೆಟ್ ಲಾಕರ್ ಗಳು ಪತ್ತೆಯಾಗಿವೆ.
ರಕ್ಷಾ ಬುಲಿಯನ್ ಗೆ ಸೇರಿದ ಮೂರು ಲಾಕರ್ ಗಳಲ್ಲಿ ಬರೋಬ್ಬರಿ 91.5 ಕೆಜಿ ಚಿನ್ನ ಮತ್ತು 152 ಕೆ.ಜಿ ಬೆಳ್ಳಿ ವಸ್ತು ಪತ್ತೆಯಾಗಿದೆ ಎಂದು ವರದಿಯಾಗಿದೆ.
PublicNext
15/09/2022 12:31 pm