ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಕೂಲಿ ಕೊಡದಿದ್ದಕ್ಕೆ ಮರ್ಸಿಡಿಸ್ ಕಾರ್‌ಗೆ ಬೆಂಕಿ ಹಚ್ಚಿದ ಮೇಸ್ತ್ರಿ

ನೋಯ್ಡಾ: ದುಡಿದವರ ಕೂಲಿಯನ್ನು ಅವರ ಬೆವರು ಆರುವ ಮುನ್ನ ಕೊಟ್ಟುಬಿಡಿ ಎಂಬ ಮಾತಿದೆ. ಆದ್ರೆ ಮನೆ ಮಾಲೀಕ‌ ಟೈಲ್ಸ್ ಕೆಲಸದ ಕೂಲಿ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಮಾಲೀಕನ ಮರ್ಸಿಡಿಸ್ ಕಾರ್‌ಗೆ ಮೇಸ್ತ್ರಿ ಬೆಂಕಿ ಹಚ್ಚಿದ್ದಾನೆ‌.

ಉತ್ತರ ಪ್ರದೇಶದ ನೋಯಿಡಾ ಪಟ್ಟಣದಲ್ಲಿ ಈ ಘಟನೆ ನಡೆದಿದೆ‌. ಟೈಲ್ಸ್ ಕೆಲಸ ಮಾಡಿಸಿಕೊಂಡ ಮನೆ ಮಾಲೀಕ ಅದರ ಹಣ ಕೊಡಲು ಸತಾಯಿಸಿದ್ದಾ‌ನೆ. ಆಗ ಬಾ ಈಗ ಬಾ ಎಂದು ಆಗಾಗ ಎಡತಾಕಿಸಿದ್ದಾನೆ. ಇದರಿಂದ ರೋಸಿ ಹೋದ ಮೇಸ್ತ್ರಿ ಮಾಲೀಕ ದುಬಾರಿ ಮರ್ಸಿಡಿಸ್ ಕಾರ್‌ಗೆ ಬೆಂಕಿ ಹಚ್ಚಿದ್ದಾನೆ.

Edited By : Nagaraj Tulugeri
PublicNext

PublicNext

14/09/2022 04:48 pm

Cinque Terre

56.34 K

Cinque Terre

3