ಕಾರವಾರ: ಕಳೆದ 2021ರ ಫೆಬ್ರುವರಿಯಲ್ಲಿ ಭಟ್ಕಳ ತಾಲೂಕಿನ ಶಿರಾಲಿಯಲ್ಲಿ ಬಾಲಕಿಯೋರ್ವಳ ಅತ್ಯಾಚಾರಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಹೆಚ್ಚುವರಿ ಸತ್ರ ನ್ಯಾಯಾಲಯ (FTSC1) ಇಬ್ಬರು ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಿದೆ.
ಬಾಲಕಿಯೊಂದಿಗೆ ಸಂಭೋಗ ನಡೆಸಿ ಆಕೆ ಗರ್ಭಧರಿಸಲು ಕಾರಣನಾದ ಶಿರಾಲಿ ಗುಡಿಹಿತ್ತಲ ನಿವಾಸಿ ಶಿವರಾಜ್ ನಾಯ್ಕ (23)ನಿಗೆ 20 ವರ್ಷ ಜೈಲು ಹಾಗೂ 95 ಸಾವಿರ ರೂ. ದಂಡ ಮತ್ತು ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆಕೆಯ ಸಂಬಂಧಿ, ಶಿರಸಿ ಹುಲೇಕಲ್ ನಿವಾಸಿ ರವಿಶಂಕರ ಪಟಗಾರನಿಗೆ 3 ವರ್ಷ ಜೈಲು ಹಾಗೂ 5 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.
PublicNext
07/09/2022 02:06 pm