ದರ್ಭಂಗ: ತೆರವು ಕಾರ್ಯಾಚರಣೆ ವೇಳೆ ನಡೆದ ಹಿಂಸಾಚಾರದಲ್ಲಿ ಮೃತಪಟ್ಟ ಪೊಲೀಸ್ ಕಾನ್ಸ್‌ಟೇಬಲ್ ಶವದ ಮುಂದೆ 'ಎದ್ದೇಳು ಅಪ್ಪ' ಎಂದು ಪುತ್ರ ಗೋಗರೆದಿದ್ದಾನೆ. ಆತನ ಕರುಳ ಸಂಕಟ ಎಂಥವರನ್ನೂ ಮಮ್ಮಲ ಮರುಗುವಂತೆ ಮಾಡುವಂತೆ ಮಾಡುತ್ತಿದೆ.
ಬಿಹಾರದ ದರ್ಭಾಂಗ ನಗರದ ಹೆದ್ದಾರಿ ಬಳಿ ಆಗಿರುವ ಅತಿಕ್ರಮಣ ತೆರವುಗೊಳಿಸಲು ಪಾಟ್ನಾ ಹೈಕೋರ್ಟ್ ಆದೇಶ ನೀಡಿದೆ. ಅದರನ್ವಯ ಪೊಲೀಸರು ನಿನ್ನೆ ಸೋಮವಾರ ಬೆಳಿಗ್ಗೆ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಆದ್ರೆ ಕಾರ್ಯಾಚರಣೆಗೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಕೆಲ ಉದ್ರಿಕ್ತರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಸ್ಥಳಸಲ್ಲಿ ಕರ್ತವ್ಯದಲ್ಲಿದ್ದ ಚೇತ್ ನಾರಾಯಣ್ ಸಿಂಗ್ ಅವರಿಗೆ ಕಲ್ಲು ತಾಗಿ ತೀವ್ರ ರಕ್ತಸ್ರಾವವಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ತಂದೆಯ ಸಾವಿನಿಂದ ಆಘಾತಕ್ಕೊಳಗಾದ ಪುತ್ರ ಶವದ ಮುಂದೆ 'ಎದ್ದೇಳಿ ಅಪ್ಪ' ಎಂದು ಗೋಗರೆದಿದ್ದಾನೆ. ಟ್ವಿಟ್ಟರ್‌ನಲ್ಲಿ ಹರಿದಾಡುತ್ತಿರುವ ಈ ವಿಡಿಯೋ ನೆಟ್ಟಿಗರ ಮನ ಕಲಕುತ್ತಿದೆ.
PublicNext
30/08/2022 09:40 pm