ಕನಕಪುರ: ವೃದ್ದೆಯೊಬ್ಬರಿಗೆ ಮಾದಕ ವಸ್ತುಗಳನ್ನು ಮೂಗಿಗೆ ಹಾಕಿ ಪ್ರಜ್ಞೆ ತಪ್ಪಿಸಿ 5 ಲಕ್ಷಕ್ಕೂ ಹೆಚ್ಚು ಮೌಲ್ಯದ ಒಡವೆಗಳನ್ನು ಖದೀಮರು ದೋಚಿರುವ ಘಟನೆ ಹಾರೋಹಳ್ಳಿ ಪಟ್ಟಣದಲ್ಲಿ ಜರುಗಿದೆ.
ಪಟ್ಟಣದ ಅರುಣಾಚಲೇಶ್ವರ ದೇವಾಲಯದ ಬಳಿಯ ರಸ್ತೆಯಲ್ಲಿ ವಾಸವಿದ್ದ ರುದ್ರಮ್ಮ(೬೬) ಎಂಬುವವರ ಮನೆಗೆ ನುಗ್ಗಿರುವ ದರೋಡೆಕೋರ ಹಣ್ಣುಗಳನ್ನು ತಂದ ಅಪರಿಚಿತ ವೃದ್ದೆಯ ಮೂಗಿಗೆ ಪ್ರಜ್ಞೆ ತಪ್ಪುವ ಮಾದಕವಸ್ತು ನೀಡಿ ಚಿನ್ನಾಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದಾನೆ.
30 ಗ್ರಾಮ್ ತೂಕದ ನಾಲ್ಕು ಚಿನ್ನದ ಬಳೆ, 40 ಗ್ರಾಮ್ ತೂಕದ ಚಿನ್ನದ ಸರ ಸೇರಿದಂತೆ 5 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದು ವೃದ್ದೆ ರುದ್ರಮ್ಮ ಮಗಳು ವಿಜಯಕುಮಾರಿ ಹಾರೋಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ದರೋಡೆ ಪ್ರಕರಣದಿಂದ ಹಾರೋಹಳ್ಳಿಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು ಹಾಡುಹಗಲೇ ಇಂತಹ ಕೃತ್ಯ ನಡೆದಿರುವುದು ಸಾರ್ವಜನಿಕರಲ್ಲಿ ಅಂತಕ ಮನೆ ಮಾಡಿದ್ದು ಶೀಘ್ರವೇ ಕೃತ್ಯ ನಡೆಸಿದ ಆರೋಪಿಗಳನ್ನು ಬಂಧಿಸುವಂತೆ ಪೋಲಿಸರನ್ನು ಸಾರ್ವಜನಿಕರು ಒತ್ತಾಯಿಸಿದ್ದಾರೆ.
PublicNext
27/08/2022 05:27 pm