ಕನಕಪುರ: ಮಧ್ಯವಯಸ್ಕ ವ್ಯಕ್ತಿಯೊಬ್ಬ ಕೆರೆಯಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಕನಕಪುರ ತಾಲೂಕಿನ ಹಾರೋಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮೇಡಮಾರನಹಳ್ಳಿ ಕೆರೆಯಲ್ಲಿ ಜರುಗಿದೆ.
ಮೃತ ವ್ಯಕ್ತಿಯನ್ನು ಬಿಡದಿ ಹೋಬಳಿ ಹಂಚೀಪುರ ಕಾಲೋನಿ ಗ್ರಾಮದ ಸೋಮಶೇಖರ್(೪೨)ಎಂದು ಗುರುತಿಸಲಾಗಿದೆ. ಈತ ಮದ್ಯವೆಸನಿಯಾಗಿದ್ದು ಕುಡಿತದ ಚಟಕ್ಕೆ ಬಿದ್ದು ಯಾವಾಗಲೂ ಮತ್ತಿನಲ್ಲಿ ಇರುತ್ತಿದ್ದ. ಕುಡಿದ ಅಮಲಿನಲ್ಲಿ ಕೆರೆಗೆ ಬಿದ್ದು ಸತ್ತಿದ್ದಾನೆ ಎನ್ನಲಾಗಿದೆ.
ಕಳೆದ ಮೂರು ದಿನಗಳ ಹಿಂದೆಯೇ ಬಿದ್ದಿದ್ದು ಬುಧವಾರ ಮೃತದೇಹ ಕೆರೆಯಲ್ಲಿ ಮೃತದೇಹ ತೇಲುತ್ತಿದ್ದುದ್ದನ್ನು ಕಂಡ ಗ್ರಾಮಸ್ಥರು ಪೊಲೀಸ್ ಠಾಣೆಗೆ ಸುದ್ದಿ ಮುಟ್ಟಿಸಿದ್ದಾರೆ. ಘಟನೆ ವಿಷಯ ತಿಳಿದು ಹಾರೋಹಳ್ಳಿ ಸಿಪಿಐ ರವಿ, ಎಸೈ ನಟರಾಜು ಮತ್ತು ತಂಡ ಶವವನ್ನು ಕೆರೆಯಿಂದ ಮೇಲೆತ್ತಿ ಶವ ಪರೀಕ್ಷೆ ಮಾಡಿಸಿದ್ದಾರೆ. ಹಾರೋಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
24/08/2022 05:57 pm