ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜೈಪುರದ ಕ್ಯಾಸಿನೊ ಪಾರ್ಟಿಯಲ್ಲಿ ಖಾಕಿ ಬಲೆಗೆ ಬಿದ್ದ ಕರ್ನಾಟಕದ ಅಧಿಕಾರಿಗಳು ಸೇರಿ 84 ಮಂದಿ ಅರೆಸ್ಟ್

ಜೈಪುರ: ಜೈಸಿಂಗ್‌ಪುರ ಖೋರ್ ಪೊಲೀಸ್ ಠಾಣೆ ವ್ಯಾಪ್ತಿಯ ಫಾರ್ಮ್ ಹೌಸ್‌ನಲ್ಲಿ ನಡೆಯುತ್ತಿದ್ದ ಕ್ಯಾಸಿನೊ ಮದ್ಯದ ಡ್ಯಾನ್ಸ್ ಪಾರ್ಟಿ ಮೇಲೆ ಜೈಪುರ ಪೊಲೀಸ್ ಕಮಿಷನರೇಟ್ ವಿಶೇಷ ತಂಡ ಶನಿವಾರ ಮಿಂಚಿನ ಕಾರ್ಯಾಚರಣೆ ನಡೆಸಿದೆ. ಘಟನಾ ಸ್ಥಳದಿಂದ 13 ಹುಡುಗಿಯರು ಸೇರಿದಂತೆ 84 ಜನರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಕರ್ನಾಟಕದ ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆ.

ಬಂಧಿತರು ಕರ್ನಾಟಕ, ತೆಲಂಗಾಣ, ಹರಿಯಾಣ, ಪಂಜಾಬ್, ಉತ್ತರ ಪ್ರದೇಶ, ದೆಹಲಿ ಮತ್ತು ಮಹಾರಾಷ್ಟ್ರದ ನಿವಾಸಿಗಳು ಎಂದು ತಿಳಿದುಬಂದಿದೆ. ಇದರಲ್ಲಿ ಕರ್ನಾಟಕದ ಪೊಲೀಸ್ ಇನ್​​ಸ್ಪೆಕ್ಟರ್ ಅಂಜಯ್ಯ, ಬೆಂಗಳೂರಿನ ತಹಶೀಲ್ದಾರ್ ಶ್ರೀನಾಥ್ ಮತ್ತು ಕಾಲೇಜು ಪ್ರಾಧ್ಯಾಪಕ ಕೆ.ಎಲ್. ರಮೇಶ್ ಕೂಡ ಇದ್ದಾರೆ ಎಂದು ತಿಳಿದುಬಂದಿದೆ. ಇನ್ನು ದಾಳಿಯಲ್ಲಿ ಪೊಲೀಸರು 9 ಹುಕ್ಕಾಗಳು, 21 ಜೋಡಿ ಕಾರ್ಡ್‌ಗಳು, 7 ಟೇಬಲ್‌ಗಳು, 100ಕ್ಕೂ ಹೆಚ್ಚು ಮದ್ಯದ ಬಾಟಲಿಗಳು ಮತ್ತು 23 ಲಕ್ಷದ 71 ಸಾವಿರದ 408 ರೂ. ನಗದು ವಶಕ್ಕೆ ಪಡೆದುಕೊಂಡಿದ್ದಾರೆ.

ದಾಳಿಯ ವೇಳೆ ಅಲ್ಲಿನ ದೃಶ್ಯ ನೋಡಿ ಒಂದು ಕ್ಷಣ ಪೊಲೀಸರೇ ಬೆರಗಾಗಿದ್ದಾರೆ. ಎಲ್ಲರೂ ಕುಡಿದು ಸಿನಿಮಾ ಹಾಡುಗಳಿಗೆ ಡ್ಯಾನ್ಸ್​ ಮಾಡುತ್ತಿದ್ದರು. ಫಾರ್ಮ್ ಹೌಸ್‌ನಲ್ಲಿ ಆಲ್ಕೋಹಾಲ್ ನೀಡುವುದರ ಜೊತೆಗೆ 5 ಟೇಬಲ್‌ಗಳಲ್ಲಿ ಡ್ಯಾನ್ಸ್ ಪಾರ್ಟಿಯೊಂದಿಗೆ ಆನ್‌ಲೈನ್ ಕ್ಯಾಸಿನೊ ಸಹ ನಡೆಯುತ್ತಿತ್ತು. ಅಲ್ಲದೇ ಅಲ್ಲಿದ್ದವರು ಹುಕ್ಕಾ ಸಹ ಹೊಡೆಯುತ್ತಿದ್ದರು ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೆಚ್ಚುವರಿ ಪೊಲೀಸ್ ಕಮಿಷನರ್ ಕ್ರೈಂ ಅಜಯ್‌ಪಾಲ್ ಲಂಬಾ ಅವರು ಈ ಕುರಿತು ಮಾತನಾಡಿ, ಪಾರ್ಟಿಯಲ್ಲಿ ಇರುವವರಿಗೆ ಹೊರಗಿನಿಂದ ಮಹಿಳೆಯರನ್ನು ಒದಗಿಸಲಾಗುತ್ತಿತ್ತು. ಈವೆಂಟ್ ಮ್ಯಾನೇಜರ್ ನರೇಶ್ ಮಲ್ಹೋತ್ರಾ ಅಲಿಯಾಸ್ ರಾಹುಲ್, ಅವರ ಮಗ ಮನ್ವೇಶ್, ಫಾರ್ಮ್ ಹೌಸ್ ಮ್ಯಾನೇಜರ್ ಮೋಹಿತ್ ಸೋನಿ, ಮೀರತ್ ನಿವಾಸಿ ಮನೀಶ್ ಶರ್ಮಾ ಅವರನ್ನು ಮಾನವ ಕಳ್ಳಸಾಗಣೆಯ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಲಾಗಿದೆ. ಆರೋಪಿ ಮನೀಶ್ ನೇಪಾಳದಲ್ಲೂ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಪ್ರಾಥಮಿಕ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎಂದು ಅವರು ಹೇಳಿದರು.

Edited By : Vijay Kumar
PublicNext

PublicNext

22/08/2022 01:06 pm

Cinque Terre

76.81 K

Cinque Terre

8