ಪಿಲಿಬೀತ್: ಸ್ವಾತಂತ್ರ್ಯೋತ್ಸವ ಅಂದ್ರೆ ಅದು ನಮ್ಮ ದೇಶದ ಸ್ವಾಂತಂತ್ರ್ಯಕ್ಕಾಗಿ ಹೋರಾಡಿ ಮಡಿದ ವೀರರನ್ನು ನೆನೆಯುವ ದಿನ. ಆದ್ರೆ ಈ ಪೊಲೀಸರು ಮಾತ್ರ ಅದೆಲ್ಲವನ್ನೂ ಮರೆತು ಬ್ಯಾಂಡ್ ಬಾಜಾ ತಾಳಕ್ಕೆ ನಾಗಿಣಿ ಡ್ಯಾನ್ಸ್ ಮಾಡಿದ್ದಾರೆ.
ಉತ್ತರ ಪ್ರದೇಶದ ಪಿಲಿಭೀತ್ ಜಿಲ್ಲೆಯ ಕೊತವಾಲಿ ಪೊಲೀಸ್ ಠಾಣೆ ಮುಂದೆ ಈ ಘಟನೆ ನಡೆದಿದೆ. ಧ್ವಜಾರೋಹಣ ನೆರವೇರಿಸಿದ ಪೊಲೀಸರು ನಂತರ ಬ್ಯಾಂಡ್ ಬಾರಿಸಿ ನಾಗಿಣಿ ಡ್ಯಾನ್ಸ್ ಮಾಡಿದ್ದಾರೆ. ಈ ಮೂಲಕ ಕರ್ತವ್ಯದ ಸಂಯಮ ಮರೆತಿದ್ದಾರೆ. ಈ ವಿಷಯ ತಿಳಿದ ಮೇಲಾಧಿಕಾರಿಗಳು ಅಶಿಸ್ತು ತೋರಿದ ಸಿಬ್ಬಂದಿ ಮೇಲೆ ಶಿಸ್ತು ಕ್ರಮ ಕೈಗೊಂಡಿದ್ದಾರೆ.
PublicNext
17/08/2022 06:57 pm