ಉತ್ತರಪ್ರದೇಶ : ಆರಕ್ಷಕರಿಗೆ ನೀಡುವ ಊಟ ಎಷ್ಟರ ಮಟ್ಟಿಗೆ ಕಳಪೆಯಾಗಿದೆ ಎಂದು ತಟ್ಟೆ ಸಮೇತ ಪೊಲೀಸಪ್ಪನೊಬ್ಬ ಕಣ್ಣೀರಿಟ್ಟ ಘಟನೆ ಯೋಗಿ ನಾಡಲ್ಲಿ ನಡೆದಿದೆ. ಹೌದು ಪೊಲೀಸ್ ಮೆಸ್ ನಲ್ಲಿ ಉಣಬಡಿಸಿದ ಕಳಪೆ ಆಹಾರದ ತಟ್ಟೆಯನ್ನು ಹಿಡಿದು ಸಾರ್ವಜನಿಕ ಪ್ರದೇಶದಲ್ಲಿ ಕಾನ್ಸ್ ಟೇಬಲ್ ಒಬ್ಬರು ಕಣ್ಣೀಟ್ಟ ವಿಡಿಯೋ ವೈರಲ್ ಆಗಿದೆ.
ಉತ್ತರ ಪ್ರದೇಶದ ಫಿರೋಜಾಬಾದ್ ನಲ್ಲಿ ಈ ಘಟನೆ ನಡೆದಿದ್ದು,ಅನ್ನ,ದಾಲ್ ಮತ್ತು ರೋಟಿ ಇರುವ ಊಟದ ತಟ್ಟೆ ಹಿಡಿದು ಕಾನ್ಸ್ ಟೇಬಲ್ ಮನೋಜ್ ಕುಮಾರ್ ಎಂಬುವರು ರಸ್ತೆ ಮಧ್ಯೆ ನಿಂತು ಕಣ್ಣೀರಿಟ್ಟಿದ್ದಾರೆ.
ನಾನು ಅನೇಕ ಬಾರಿ ಊಟದ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದರು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಕೆಲಸದಿಂದ ತೆಗೆದು ಹಾಕುವುದಾಗಿ ನನಗೆ ಬೆದರಿಕೆ ಹಾಕುತ್ತಿದ್ದಾರೆ. ದೀರ್ಘಾವಧಿ ಕರ್ತವ್ಯ ಮಾಡುವ ನಮಗೆ ಇಥೆಂತ ಸ್ಥಿತಿ ಎಂದು ಅಳಲು ತೋಡಿಕೊಂಡಿದ್ದಾರೆ.
ಇದೀಗ ಯೋಗಿ ಆದಿತ್ಯನಾಥ್ ಸರಕಾರ ಉತ್ತರಪ್ರದೇಶ ಪೊಲೀಸರನ್ನು ನಡೆಸಿಕೊಳ್ಳುವ ರೀತಿಯ ಬಗ್ಗೆ ವಿಪಕ್ಷಗಳು ಟೀಕೆ ವ್ಯಕ್ತಪಡಿಸಿದೆ.
PublicNext
11/08/2022 02:09 pm