ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ : ಚಾಕು ಇರಿತ ಪ್ರಕರಣ: ಆರು ಜನರನ್ನ ಬಂಧಿಸಲಾಗಿದೆ; ಎಸ್ಪಿ ಶಿವಪ್ರಕಾಶ ದೇವರಾಜು

ಗದಗ: ತಾಲೂಕಿನ ಮಲ್ಲಸಮುದ್ರ ಗ್ರಾಮದ ಎರೆಡು ಗುಂಪುಗಳ ನಡುವೆ ಗಲಾಟೆಯಲ್ಲಿ ಚಾಕು ಇರಿತ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 3 ಜನರನ್ನು ಬಂಧಿಸಲಾಗಿದೆ. ಘಟನೆಗೆ ಕಾರಣ ಸಲ್ಮಾನ್ ಹಾಗೂ ಯಲ್ಲಪ್ಪ ಇಬ್ಬರು ಸ್ನೇಹಿತರಾಗಿದ್ದು, ಮೆರವಣಿಗೆ ಗದ್ದಲದಲ್ಲಿ ತೌಸಿಫ್ ಹಾಗೂ ಮುಸ್ತಾಫ್ ಎಂಬುವನ ಕಾಲು ತುಳದಿರುತ್ತಾರೆ. ಅದಕ್ಕೆ ಜಗಳವಾಗಿರುತ್ತೆ.

ಈ ವಿಷಯ ಯಲ್ಲಪ್ಪನ ಸಹೋದರ ಸೋಮೇಶನಿಗೆ ತಿಳಿದು ಸ್ಥಳಕ್ಕೆ ಬಂದು ಗಲಾಟೆ ಮಾಡ್ತಾನೆ. ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತದಲ್ಲಿ ಸೋಮೇಶ್ ಎಂಬಾತ ತೌಸಿಫ್ ಹಾಗೂ ಮುಸ್ತಾಫ್ ಎಂಬುವರಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿರುತ್ತಾನೆ. ಇಬ್ಬರು ಗಾಯಾಳುಗಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.

ತೌಸಿಫ್ ಎಂಬುವನಿಗೆ ಗಂಭೀರ ಗಾಯಗಳಾಗಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ 6 ಜನ್ರ ಮೇಲೆ ಎಫ್.ಐ.ಆರ್ ದಾಖಲಾಗಿದೆ. ಆರೋಪಿಗಳಾದ ಸಲ್ಮಾನ್, ಸೋಮೇಶ್ ಗುಡಿ, ಯಲ್ಲಪ್ಪ ಗುಡಿ ಎಂಬುವರನ್ನು ಬಂಧಿಸಲಾಗಿದೆ. ಇನ್ನು ಮೂರು ಜನ ತಲೆಮರಿಸಿಕೊಂಡಿದ್ದಾರೆ. ಸೆಕ್ಷನ್ 143, 147, 148, 323, 207, 204, 607 ಪ್ರಕರಣದಡಿ ಕೇಸ್ ದಾಖಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಗ್ರಾಮದಲ್ಲಿ ಪೊಲೀಸ್ ಬಂದುಬಸ್ತ್ ಕಲ್ಪಿಸಲಾಗಿದೆ ಅಂತಿದ್ದಾರೆ ಎಸ್.ಪಿ ಶಿವಪ್ರಕಾಶ್ ದೇವರಾಜು.

Edited By :
PublicNext

PublicNext

10/08/2022 05:30 pm

Cinque Terre

51.84 K

Cinque Terre

0

ಸಂಬಂಧಿತ ಸುದ್ದಿ