ದಾವಣಗೆರೆ: ಪ್ರತಿಷ್ಠಿತ ಹೋಟೆಲ್‌ನಲ್ಲಿ ತಡರಾತ್ರಿವರೆಗೆ ಯುವಕ, ಯುವತಿಯರು ಮೋಜು ಮಸ್ತಿ ಮಾಡುತ್ತಿದ್ದು, ಪೊಲೀಸರು ದಾಳಿ ನಡೆಸಿದ ಘಟನೆ ದಾವಣಗೆರೆಯ ಪಕ್ಕದ ಮಿಟ್ಲಕಟ್ಟೆ ಗ್ರಾಮದಲ್ಲಿನ 'ದಿ ಸ್ಟೇಜ್' ಹೋಟೆಲ್‌ನಲ್ಲಿ ನಡೆದಿದೆ.
ದಾವಣಗೆರೆಯಲ್ಲಿ ತಡ ರಾತ್ರಿ ಹೋಟೆಲ್ ಮೇಲೆ ಪೊಲೀಸರು ದಾಳಿ ನಡೆಸಿದ ವೇಳೆ ಇದು ಬೆಳಕಿಗೆ ಬಂದಿದೆ. ಮಧ್ಯರಾತ್ರಿ 2 ಗಂಟೆಯವರೆಗೂ ಅಕ್ರಮವಾಗಿ ಯುವಕ, ಯುವತಿಯರು ಸೇರಿ ಪಾರ್ಟಿ ಆಯೋಜನೆ ಮಾಡಿದ್ದಾರೆ. ಡಿಜೆ ಸಾಂಗ್‌ಗೆ ಕುಣಿದು ಕುಪ್ಪಳಿಸುತ್ತಿದ್ದರು. ಈ ಬಗ್ಗೆ ಸಾರ್ವಜನಿಕರು ಕೆಆರ್‌ಎಸ್ ಪಕ್ಷದವರಿಗೆ ಮಾಹಿತಿ ನೀಡಿದ್ದರು. ತಡರಾತ್ರಿ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಹರಿಹರ ಗ್ರಾಮಾಂತರ ಪೊಲೀಸರು ಆಗಮಿಸುತ್ತಿದ್ದಂತೆ ಮದ್ಯಪಾನ ಮಾಡುತ್ತಾ ಮೋಜು ಮಸ್ತಿ ಮಾಡುತ್ತಿದ್ದ ಯುವಕ, ಯುವತಿಯರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಅನಧಿಕೃತ ಪಾರ್ಟಿ ಇದಾಗಿದ್ದು, ಹರಿಹರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪ್ರತಿ ಶನಿವಾರ ದಿನ ಅಕ್ರಮವಾಗಿ ಪಾರ್ಟಿ ನಡೆಸಲಾಗುತ್ತಿದ್ದು, ವಾರದ ಕೊನೆ ದಿನಗಳಾದ ಶನಿವಾರ ಮತ್ತು ಭಾನುವಾರ ಪಾರ್ಟಿ ಆಯೋಜನೆಯನ್ನು ಹೋಟೆಲ್‌ನಿಂದ ಮಾಡಲಾಗುತ್ತಿತ್ತು ಎನ್ನಲಾಗಿದೆ.
PublicNext
07/08/2022 04:50 pm